×
Ad

ಸ್ಟಾರ್ ಬಕ್ಸ್ ಇಲ್ಲದ ಪಾಕ್ ನಲ್ಲಿ ಸತ್ತಾರ್ ಬಕ್ಷ್ ಬಲು ಫೇಮಸ್ಸು !

Update: 2016-10-06 14:33 IST

ದುಬೈ, ಅ.6:  ಅಮೆರಿಕದ ಸ್ಟಾರ್ ಬಕ್ಸ್ ಫೇಮಸ್ಸು ನಿಜ, ಈ ಸ್ಟಾರ್ ಬಕ್ಸ್ ಗೆ ಪಾಕಿಸ್ತಾನದಲ್ಲಿ ಮೂರು ವರ್ಷಗಳ ಹಿಂದೆ ಯಾವುದೇ ಶಾಖೆಗಳಿರಲಿಲ್ಲವೆಂಬುದೂ ನಿಜ. ಆದರೇನಂತೆ ? ಪಾಕಿಸ್ತಾನದಲ್ಲಿ ಅದರದೇ ಆದ ಸತ್ತಾರ್ ಬಕ್ಷ್ ಇದೆ ಹಾಗೂ ಅದು ಬಲು ಫೇಮಸ್ಸು ಆಗಿದೆ ಕೂಡ.

ಅಂದ ಹಾಗೆ ಪಾಕಿಸ್ತಾನದ ಸತ್ತಾರ್ ಬಕ್ಸ್ ನ ಲಾಂಛನ ಕೂಡ ಅಮೇರಿಕಾದ ದೈತ್ಯ ಕಾಫಿ ಹೌಸ್ ಚೈನ್‌ಸ್ಟಾರ್ ಬಕ್ಸ್ ನಿಂದ ಪ್ರೇರಿತವಾಗಿದೆ. ಸ್ಟಾರ್ ಬಕ್ಸ್ ಗೆ ವಿಶ್ವದಾದ್ಯಂತ 16,000 ಶಾಖೆಗಳಿದ್ದು ಅದು ಪಾಕಿಸ್ತಾನದಲ್ಲಿ ತನ್ನ ಶಾಖೆಯನ್ನು 2013ರಿಂದ ಹೊಂದಿದೆ.

ಪಾಕಿಸ್ತಾನದ ಸತ್ತಾರ್ ಬಕ್ಷ್ ಸ್ಥಾಪಕರು ಇಬ್ಬರು ಪ್ರತಿಭಾನ್ವಿತ ಯುವ ಉದ್ಯಮಿಗಳಾದ ರಿಝ್ವಾನ್ ಅಹ್ಮದ್ ಹಾಗೂ ಅದ್ನಾನ್‌ ಯೂಸುಫ್ ಎಂಬವರು.

ಈ ಹಿಂದೊಮ್ಮೆ ಅಮೆರಿಕಾದ ಸ್ಟಾರ್ ಬಕ್ಸ್, ಸತ್ತಾರ್ ಬಕ್ಷ್ ವಿರುದ್ಧ ಕಾನೂನು ನೋಟಿಸ್ ಒಂದನ್ನು ಜಾರಿಗೊಳಿಸಿತ್ತೆಂಬುದನ್ನುಸತ್ತಾರ್ ಬಕ್ಷ್ ಆಡಳಿತ ನಿರ್ದೇಶಕ ಅರ್ಮಘನ್ ಶಾಹಿದ ನೆನಪಿಸುತ್ತಾರೆ. ಒಮ್ಮೆ ದೃಷ್ಟಿ ಹಾಯಿಸಿದಾಗ ಅದುಸ್ಟಾರ್ ಬಕ್ಸ್ ಲಾಂಛನದಂತೆಯೇ ಕಂಡರೂ ಅದು ನಿಜವಾಗಿಯೂ ಬೇರೆಯಾಗಿದ್ದು ಮೀಸೆಧಾರಿ ವ್ಯಕ್ತಿಯೊಬ್ಬನ ಚಿತ್ರವಿದೆ. ಆದರೆ ಈ ಕಾನೂನು ಹೋರಾಟದಲ್ಲಿ ಕೊನೆಗೆ ಅಮೇರಿಕನ್ ಕಂಪೆನಿ ಸೋಲನ್ನನುಭವಿಸಬೇಕಾಯಿತು.

ಸತ್ತಾರ್ ಬಕ್ಷ್ ಮೆನು ಹಾಗೂಸ್ಟಾರ್ ಬಕ್ಸ್ ಮೆನು ಕೂಡ ವಿಭಿನ್ನವಾಗಿದೆಯೆಂದು ಶಾಹಿದ್ ಹೇಳುತ್ತಾರಲ್ಲದೆ ಅದರ ಮೆನುವಿನಲ್ಲಿ ಕಾಫಿ, ಪೇಸ್ಟ್ರಿ, ಡೆಸ್ಸರ್ಟ್ಸ್, ಸ್ಯಾಂಡ್ ವಿಚ್, ಹ್ಯಾಂಬರ್ಗರ್ಸ್ ಹಾಗೂ ವಿವಿಧ ರೀತಿಯ ಬಿಸಿ ಹಾಗೂ ತಂಪು ಪಾನೀಯಗಳು ಸೇರಿವೆ ಎಂದು ವಿವರಿಸುತ್ತಾರೆ.

ಸತ್ತಾರ್ ಬಕ್ಷ್‌ಗೆ ಪಾಕಿಸ್ತಾನದಲ್ಲಿ ಎರಡು ಶಾಖೆಗಳಿದ್ದು ಒಂದು ಇಸ್ಲಾಮಾಬಾದ್ ನಲ್ಲಿದ್ದರೆ ಇನ್ನೊಂದು ಕರಾಚಿಯಲ್ಲಿದೆ. ಸಾಧ್ಯವಾದಲ್ಲಿ ದೇಶದ ಹೊರಗೆ ಕೂಡ ತನ್ನ ಶಾಖೆಗಳನ್ನು ತೆರೆಯುವ ಯೋಚನೆ ಕಂಪೆನಿಗಿದೆ.

ಪಾಕಿಸ್ತಾನಿ ಕಲಾವಿದರ ಲೈವ್ ಸಂಗೀತ ಕಾರ್ಯಕ್ರಮಗಳನ್ನು ಸತ್ತಾರ್ ಬಕ್ಷ್ ಆಯೋಜಿಸುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News