×
Ad

ಮರದ ಕೊಂಬೆ ಮುರಿದು ಬಿದ್ದು ಬೈಕಿಗೆ ಹಾನಿ

Update: 2016-10-06 18:45 IST

ಪುತ್ತೂರು, ಅ.6: ಪುತ್ತೂರು ನಗರದ ಪುರಸಭಾ ಕಚೇರಿ ಬಳಿಯ ಮಾರ್ಕೆಟ್ ರಸ್ತೆಯ ಬದಿಯಲ್ಲಿದ್ದ ಮರವೊಂದರ ಕೊಂಬೆಯೊಂದು ಹಠಾತ್ ಮುರಿದು ಬಿದ್ದು ಬೈಕೊಂದಕ್ಕೆ ಹಾನಿಯಾದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿತು.

ಮಾರ್ಕೆಟ್ ರಸ್ತೆಯ ಬದಿಯ ಧರೆಯಲ್ಲಿದ್ದ ದೇವದಾರು ಮರದ ಕೊಂಬೆಯೊಂದು ಮುರಿದು ರಸ್ತೆಯ ಪುಟ್‌ಪಾತ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕೊಂದರ ಮೇಲೆ ಬಿದ್ದಿದೆ. ಇದರಿಂದಾಗಿ ಬೈಕಿಗೆ ಹಾನಿಯಾಗಿದೆ. ಹಾನಿಗೊಳಗಾದ ಬೈಕ್ ಮಾರ್ಕೆಟ್ ರಸ್ತೆಯಲ್ಲಿರುವ ಜಿಲ್ಲಾ ಕೋಳಿ ಸಾಕಾಣಿಕೆದಾರರ ವಿವಿಧೋದ್ದೇಶ ಸಹಕಾರಿ ಸಂಘದ ಉದ್ಯೋಗಿಯೊಬ್ಬರಿಗೆ ಸೇರಿದ್ದಾಗಿದೆ.

ಸಹಕಾರಿ ಸಂಘದ ಉದ್ಯೋಗಿ ತನ್ನ ಬೈಕನ್ನು ರಸ್ತೆಯ ಫುಟ್‌ಪಾತ್‌ನಲ್ಲಿ ನಿಲ್ಲಿಸಿದ್ದರು. ಅದರ ಮೇಲೆಯೇ ಮರದ ಕೊಂಬೆ ಮುರಿದು ಬಿದ್ದಿದೆ. ಈ ಸ್ಥಳದಲ್ಲಿ ಪ್ರತಿನಿತ್ಯ ರಿಕ್ಷಾಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಆದರೆ ಮರದ ಕೊಂಬೆ ಮುರಿದು ಬಿದ್ದ ಸಂದರ್ದಲ್ಲಿ ಅಲ್ಲಿ ರಿಕ್ಷಾಗಳು ಇಲ್ಲದ ಕಾರಣ ಸಂಭಾವ್ಯ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News