ದ.ಕ. ಜಿಲ್ಲಾ ಮಟ್ಟದ ಈಜು ಸ್ಪರ್ಧೆ : ಮಂಗಳಾ ಈಜು ಕ್ಲಬ್‌ಗೆ 44 ಚಿನ್ನ ಸಹಿತ 70 ಪದಕ

Update: 2016-10-06 15:05 GMT

ಮಂಗಳೂರು, ಅ.6: ಮಂಗಳೂರು ಮಹಾ ನಗರ ಪಾಲಿಕೆ ಈಜುಕೊಳದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಪದವಿ ಪೂರ್ವ ವಿಭಾಗ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಮಂಗಳಾ ಈಜು ಕ್ಲಬ್ಬಿನ ಸದಸ್ಯರು ವಿವಿಧ ವಯೋವರ್ಗದ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ 44 ಚಿನ್ನದ ಪದಕ, 19 ಬೆಳ್ಳಿ ಪದಕ, 7 ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಇವರು ನಗರದ ನಗರ ಪಾಲಿಕಾ ಈಜು ಕೊಳದಲ್ಲಿ ಕ್ಲಬ್ಬಿನ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ, ಸಹಾಯಕ ಈಜು ತರಬೇತುದಾರ ಪುಂಡಲೀಕ ಖಾರ್ವಿ, ಶಿವಾನಂದ ಗಟ್ಟಿ, ಸಂತೋಷ್ ಪಿ.ಎಂ. ಇವರಿಂದ ತರಬೇತು ಪಡೆಯುತ್ತಿದ್ದಾರೆ. ಪದಕ ವಿಜೇತರಾದ ಆರ್ಯ ಬಾಳಿಗಾ, ಎಸ್.ಆರ್. ರಚನಾ ರಾವ್, ಆರಾಧನ ಬೇಕಲ್, ಸಾನ್ಯಾ ಡಿ. ಶೆಟ್ಟಿ, ಪ್ರಥಮ್ ಎ. ಕುಂದರ್, ಪ್ರೇರಣಾ ಎ. ಕುಂದರ್, ತ್ರಿಷಾ, ಗ್ರೀಷ್ಮಾ ಶೆಟ್ಟಿ, ಪರೀಕ್ಷಿತ್, ಮಾನಸ, ಸಾಕ್ಷರ್ ಪಿ. ರೈ, ದರ್ಷನ್, ಭೂಷಿತ್ ಉಳ್ಳಾಲ್, ಕಿಶನ್, ಸಾಯಿ ಕರಣ್, ಸ್ಮ್ತ್ರತಿ, ಶಿಶೀರ್ ಎಸ್. ಗಟ್ಟಿ, ತವಿಷಿ, ಗ್ರೆವಿಲ್ ಪಿಂಟೋ, ನಮತಾ ಶೆಟ್ಟಿ, ರೀಷಾ ಶೆಣೈ, ವಿಯೋನ್ ಡಿಸೋಜ ಅವರೊಂದಿಗೆ ಸಹಾಯಕ ಈಜು ತರಬೇತುದಾರ ಪುಂಡಲೀಕ ಖಾರ್ವಿ, ಮುಖ್ಯತರಬೇತುದಾರ ಲೋಕರಾಜ್ ವಿಟ್ಲ ಕ್ಲಬ್ ಅಧ್ಯಕ್ಷ ಪ್ರಮುಖ್ ರೈ, ಉಪಾಧ್ಯಕ್ಷ ರೂಪಾ ಜಿ. ಪ್ರಭು, ಸಹಾಯಕ ಈಜು ತರಬೇತುದಾರ ಸಂತೋಷ್ ಪಿ.ಎಂ. ಇದ್ದಾರೆ. ವಿಜೇತರು ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ 16 ಸ್ಪರ್ಧಿಗಳು ಆಯ್ಕೆಯಾಗಿರುತ್ತಾರೆ ಎಂದು ಕ್ಲಬ್ ಕಾರ್ಯದರ್ಶಿ ಎಂ. ಶಿವಾನಂದ ಗಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News