ಮಾದಕ ದ್ರವ್ಯ ಸೇವನೆ 3 ದಶಕಗಳಲ್ಲಿ 8 ಪಟ್ಟು ವೃದ್ಧಿ: ಡಾ.ದೇವರಮನೆ

Update: 2016-10-06 17:49 GMT

ಉಡುಪಿ, ಅ.6: ಭಾರತದಲ್ಲಿ 1978ರಿಂದ 2008ರವರೆಗೆ ನಡೆದ ಅಧ್ಯ ಯನದಲ್ಲಿ ಮೂರು ದಶಕಗಳಲ್ಲಿ ಮಾದಕ ದ್ರವ್ಯ ಹಾಗೂ ಮದ್ಯ ಸೇವನೆ ಎಂಟು ಪಟ್ಟು ಹೆಚ್ಚಾಗಿದೆ ಎಂಬುದು ಬಹಿರಂಗಗೊಂಡಿದೆ ಎಂದು ಉಡುಪಿಯ ಮನೋತಜ್ಞ ಡಾ.ವಿರೂಪಾಕ್ಷ ದೇವರಮನೆ ತಿಳಿಸಿದ್ದಾರೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ವತಿಯಿಂದ ಗುರುವಾರ ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆದ ಮಾದಕದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ‘ಡ್ರಗ್ ದ ಕಿಲ್ಲರ್’ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಇಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.21ರಷ್ಟು ಮಂದಿ ಮದ್ಯ ಸೇವನೆ ಮಾಡಿದರೆ ಶೇ.3ರಷ್ಟು ಮಂದಿ ಗಾಂಜಾ ಸೇವನೆ ಮಾಡುತ್ತಿದ್ದಾರೆ. ಶೇ.17ರಿಂದ 20ರಷ್ಟು ಮಂದಿ ಮಾದಕ ವಸ್ತುಗಳಿಗೆ ಅಂಟಿಕೊಂಡು ಬದುಕು ತ್ತಿದ್ದಾರೆ. ಸಿಗರೇಟಿನಲ್ಲಿ 4ಸಾವಿರ ರಾಸಾಯನಿಕಗಳಿದ್ದು, ಅವುಗಳಲ್ಲಿ 40ಕ್ಕೂ ಹೆಚ್ಚು ಕ್ಯಾನ್ಸರ್‌ಮಾರಕ ರಾಸಾಯನಿಕಗಳಿವೆ ಎಂದು ಅವರು ಹೇಳಿದರು.

ಕುತೂಹಲ, ಸ್ನೇಹಿತರ ಒತ್ತಡ, ದುಃಖ, ನೋವು ಕಡಿಮೆ ಮಾಡಿಕೊಳ್ಳಲು, ಹೊಸ ರೀತಿಯ ಪ್ರಯೋಗದ ಕಾರಣಗಳಿಂದಾಗಿ ಯುವಕರು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಾರೆ. ಆದುದರಿಂದ ಯುವಕರು ಹದಿಹರೆಯದಲ್ಲಿ ಈ ಬಗ್ಗೆ ಎಚ್ಚರ ವಹಿಸಬೇಕು. ಇದಕ್ಕೆ ಈ ಕುರಿತು ಎಲ್ಲೆಡೆ ಜಾಗೃತಿ ಮೂಡಿ ಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಅಭಿಯಾನವನ್ನು ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಧರ್ಮಗುರು ಫಾ.ವಿಲಿ ಯಂ ಮಾರ್ಟಿಸ್, ಅಕ್ಸೆಸ್ ಇಂಡಿಯಾದ ಸಂ ಯೋಜಕ ಮುಹಮ್ಮದ್ ಇಕ್ಬಾಲ್, ಸಿಎಫ್‌ಐ ರಾಜ್ಯ ಪ್ರಧಾನ ಕಾರ್ಯ ದರ್ಶಿ ಸ್ವದಕತ್ ಬೆಂಗಳೂರು, ರಾಜ್ಯ ಸಮಿತಿ ಸದಸ್ಯ ಇರ್ಷಾದ್, ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಅತಾವುಲ್ಲಾ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಸಿಎಫ್‌ಐ ರಾಜ್ಯ ಅಧ್ಯಕ್ಷ ಮುಹಮ್ಮದ್ ತುಫೈಲ್ ವಹಿಸಿದ್ದರು. ಸಿಎಫ್‌ಐನ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಶಫೀಕ್ ಸ್ವಾಗತಿಸಿದರು. ಸಿದ್ಧೀಕ್ ವಂದಿಸಿದರು. ರಿಯಾಝ್ ಮಂಗಳೂರು ಕಾರ್ಯ ಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ನಿಂದ ಬನ್ನಂಜೆವರೆಗೆ ವಿದ್ಯಾರ್ಥಿ ಜಾಥ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News