ಪಂಬತ್ತಾಜೆ: ಕನ್ಯಾನ ಸರಕಾರಿ ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ಶಿಬಿರ
Update: 2016-10-07 16:16 IST
ಬಂಟ್ವಾಳ, ಅ.7: ಕರೋಪಾಡಿ ಗ್ರಾಮದ ಪಂಬತ್ತಾಜೆಯ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ನಡೆಯುತ್ತಿರುವ ಕನ್ಯಾನದ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ 2016-17ನೆ ಸಾಲಿನ ವಾರ್ಷಿಕ ಶಿಬಿರದ ನಾಲ್ಕನೆ ದಿನ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಅಪರಾಹ್ನ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೋಹನ್ ಕುಮಾರ್ ಕುಂಬ್ಳೆಕರ್ ‘ವ್ಯಕ್ತಿ ವಿಕಸನ ಗುರಿ ಸಾಧನೆ, ಪತಂಜಲಿ ಯೋಗ ಟ್ರಸ್ಟ್‌ನ ಡಾಕ್ಟರ್ ಜ್ಞಾನೇಶ್ವರ ರಾವ್ ‘ಆಯುರ್ವೇದದ ಚಿಂತನೆ’ ವಿಚಾರವಾಗಿ ಉಪನ್ಯಾಸ ನೀಡಿದರು. ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಕರೋಪಾಡಿ ಪಂಚಾಯತ್‌ನ ಮಾಜಿ ಸದಸ್ಯ ಕೋಡ್ಲ ಗಣಪತಿ ಭಟ್ ವಹಿಸಿದರು. ನಂತರ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನವದುರ್ಗಾ ಶ್ರೀಲಕ್ಷ್ಮೀ ಜನಾರ್ದನ ವಿಶ್ವಸ್ಥ ಮಂಡಳಿ ಸಹಕಾರದೊಂದಿಗೆ ಮುರಳೀಧರ್ ಕೊಂಚಾಡಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.