‘ಮಂಗಳೂರು ವೆಡ್ಡಿಂಗ್ ಫೇರ್’ಗೆ ಚಾಲನೆ
ಮಂಗಳೂರು, ಅ.7: ಬೆಂಗಳೂರಿನ ಪ್ರಸಿದ್ಧ ಚಿನ್ನ ಮತ್ತು ವಜ್ರಾಭರಣ ಸಂಸ್ಥೆ ಶ್ರೀ ಗಣೇಶ್ ಡೈಮಂಡ್ ಆ್ಯಂಡ್ ಜುವೆಲ್ಲರಿ ಪ್ರಸ್ತುತಪಡಿಸುವ ‘ಮಂಗಳೂರು ವೆಡ್ಡಿಂಗ್ ಫೇರ್ 2016’ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಇಂದು ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್ ಸೆಂಟರ್‌ನಲ್ಲಿ ಚಲನಚಿತ್ರ ನಟಿ ಜೆನಿಫರ್ ಕೋತ್ವಾಲ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ‘‘ವಿವಾಹ ಕಾರ್ಯಕ್ರಮದಲ್ಲಿ ವಧು ವರರಿಂದ ಹಿಡಿದು ಮನೆಯವರಿಲ್ಲರಿಗೂ ಅಗತ್ಯವಾದ ಎಲ್ಲಾ ಸಾಮಗ್ರಿಗಳು ಒಂದೇ ವೇದಿಕೆಯಡಿ ದೊರೆಯುತ್ತಿರುವುದು ಸಂತಸದ ವಿಚಾರ. ಮಾತ್ರವಲ್ಲದೆ ಪ್ರದರ್ಶನವನ್ನು ಮೇಳದ ಆಯೋಜಕ ಸಂಸ್ಥೆಯಾದ ‘ಐ ಡ್ರೀಮ್’ನವರು ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದಾರೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮೇಳದ ಆಯೋಜಕ ಸಂಸ್ಥೆ ‘ಐ ಡ್ರೀಮ್’ನ ಮಾಲಕ ಇಲಿಯಾಸ್ ಅಖ್ತರ್, ಸ್ನೇಹ ಕೋಟ್ಯಾನ್, ಸಾಂಚಿಯಾ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಗಣೇಶ್ ಡೈಮಂಡ್ ಆ್ಯಂಡ್ ಜುವೆಲ್ಲರಿ ಸಂಸ್ಥೆಯ ನವ ನವೀನ ಮಾದರಿಯ ಚಿನ್ನ ಮತ್ತು ವಜ್ರಾಭರಣ ಪ್ರದರ್ಶನ, ಆ್ಯಂಟಿಕ್ ಪ್ರದರ್ಶನ, ವಾಚ್‌ಗಳು, ದೀಪಂ ಸಿಲ್ಕ್ಸ್, ವರ್ಸಿದಿ, ವಿಜಯಲಕ್ಷ್ಮೀ ಸಿಲ್ಕ್ ಮೊದಲಾದ ಸಾರಿಗಳ ಪ್ರದರ್ಶನ, ಡಿಸೈನರ್ಸ್ ಜಾಕೆಟ್ ಮುಂತಾದವುಗಳು ಪ್ರದರ್ಶನದಲ್ಲಿವೆ.
ಮೇಳದಲ್ಲಿ ಮದುವೆಯಲ್ಲಿ ವಧು ವರರ ಜತೆಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸವರೆಲ್ಲರು ತೊಡುವ ಅದ್ದೂರಿ, ಸಾಮಾನ್ಯ, ಸಾಂಪ್ರದಾಯಿಕ, ಕಲಾತ್ಮಕ ಹಾಗೂ ಫ್ಯಾಶನ್‌ಭರಿತ ನಾನಾ ಪ್ರಕಾರದ ವಸ್ತ್ರಗಳು, ಚಿನ್ನಾಭರಣ, ವಜ್ರಾಭರಣ, ್ಯಾಶನ್ ಆಭರಣಗಳ ಅಪಾರ ಸಂಗ್ರಹವಿದೆ. ಮದುವೆ ಆಯೋಜಕರು, ಫೋಟೋಗ್ರಾಫರ್ಸ್, ಹಾಲಿಡೇ ಪ್ಯಾಕೇಜ್, ಮೇಕಪ್ ಆರ್ಟಿಸ್ಟ್‌ಗಳು ಸೇರಿದಂತೆ ಮದುವೆ ಸಮಾರಂಭಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ಇಲ್ಲಿ ಗ್ರಾಹಕರಿಗೆ ಲಭ್ಯವಿದೆ. ಮುಂಬೈ, ಹೈದರಾಬಾದ್, ದಿಲ್ಲಿ, ರಾಜ್‌ಕೋಟ್, ಅಹಮ್ಮದಾಬಾದ್, ಬೆಂಗಳೂರು, ಮಂಗಳೂರು, ತಿರುಚ್ಚಿ, ಜೈಪುರ್ ಸೇರಿದಂತೆ ದೇಶದ ನಾನಾ ಭಾಗಗಳ ಡಿಸೈನರ್‌ಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದಾರೆ.
ಈ ಪ್ರದರ್ಶನ ಮತ್ತು ಮಾರಾಟ ಅಕ್ಟೋಬರ್ 9ರವರೆಗೆ ನಡೆಯಲಿದ್ದು, ಬೆಳಗ್ಗೆ 10-30ರಿಂದ ರಾತ್ರಿ 9 ಗಂಟೆಯವರೆಗೆ ಮೇಳಕ್ಕೆ ಗ್ರಾಹಕರು ಭೇಟಿ ನೀಡಬಹುದಾಗಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.