ಆಹಾರ ಪಡಿತರ ಕೂಪನ್ ಕೇಂದ್ರ ಉದ್ಘಾಟನೆ
Update: 2016-10-07 18:15 IST
ಮಂಗಳೂರು, ಅ. 7: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ನಗರದ 45ನೆ ಪೋರ್ಟ್ ವಾರ್ಡಿನ ಬದ್ರಿಯಾ ರಸ್ತೆಯ ಕಂದುಕ ಪ್ರದೇಶದಲ್ಲಿ ನೂತನ ಫ್ರಾಂಚೈಸಿ ಎಂ.ಎಸ್.ಸರ್ವಿಸಸ್‌ನ ಆಹಾರ ಪಡಿತರ ಕೂಪನ್ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಾಲಿದೆ ಸದಸ್ಯ ಅಬ್ದುಲ್ಲತೀಫ್ ಕಂದಕ್,ಕಟ್ಟಡ ಮಾಲಕ ಶರವು ರಾಘವೇಂದ್ರ ಶಾಸ್ತ್ರಿ,ಸಹಾಯಕ ನಿರ್ದೇಶಕಿ ಸುನಂದಾ ಕೆ., ಆಹಾರ ನಿರೀಕ್ಷಕ ಚಂದ್ರಶೇಖರ್ ಗಟ್ಟಿ, ಕಮಲಾ, ಇಲಾಖೆಯ ಸಿಬ್ಬಂದಿಯಾದ ನವೀನ್, ಶ್ರೀದರ್,ಕೀಶೋರ್, ರಮೇಶ್, ಸ್ಥಳೀಯರಾದ ಅಂಥೋನಿ ಸಾಂದಲ್, ಸುರೇಶ್, ಸಲಾಂ ಕಂದಕ್, ಕೆ.ಪಿ.ಮೊದಿನ್ ಉಪಸ್ಥಿತರಿದ್ದರು.