ಕುಂಬಳೆ : ಬೈಕ್ ಕಳವುಗೈದ ಪ್ರಕರಣದ ಆರೋಪಿಯ ಬಂಧನ
Update: 2016-10-07 20:37 IST
ಮಂಜೇಶ್ವರ, ಅ.7: ಕುಂಬಳೆಯಿಂದ ಬೈಕ್ ಕಳವುಗೈದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂಬ್ರಾಣ ನಿವಾಸಿ ರವೀಂದ್ರನ್ ಯಾನೆ ಬಡ್ಡಿ ರವಿ(20) ಎಂದು ಗುರುತಿಸಲಾಗಿದೆ.
ಕುಂಬಳೆ ರೈಲು ನಿಲ್ದಾಣ ಬಳಿಯಿಂದ ಮೊಗ್ರಾಲಿನ ದಿಲ್‌ಶಾದ್ ಎಂಬವರ ಬೈಕ್ ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಕುಂಬಳೆ ಬದ್ರಿಯಾ ನಗರದ ಮೊಯ್ದೀನ್ ಸಂಶೀರ್‌ನನ್ನು ಈ ಮೊದಲು ಬಂಧಿಸಲಾಗಿತ್ತು.