ಆಕ್ಟೀವಾಗೆ ಜೀಪು ಢಿಕ್ಕಿ: ಸವಾರ ಮೃತ್ಯು
Update: 2016-10-07 21:30 IST
ಬೆಳ್ತಂಗಡಿ, ಅ.7: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆ ಸಮೀಪದ ನಿಡಿಗಲ್ ಎಂಬಲ್ಲಿ ಹೋಂಡಾ ಆಕ್ಟಿವಾ ಹಾಗು ಜೀಪು ನಡುವೆ ಅಪಘಾತ ಸಂಭವಿಸಿದ್ದು ಸವಾರ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಉಜಿರೆ ಹಳೆಪೇಟೆ ವಿವೇಕಾನಂದ ನಗರ ನಿವಾಸಿ ಶರೀಫ್ ಎಂಬವರ ಪುತ್ರ ಮಹಮ್ಮದ್ ಸಿನಾನ್ (19) ಮೃತಪಟ್ಟ ದ್ವಿಚಕ್ರ ಸವಾರ.
ಈತ ಉಜಿರೆಯಿಂದ ನಿಡಿಗಲ್ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಢಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಸಿನಾನ್ ಅವರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಈತ ಉಜಿರೆಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.