×
Ad

ಸರ ಕಳವು: ಆರೋಪಿಗಳ ಬಂಧನ

Update: 2016-10-07 23:13 IST

ಮಂಗಳೂರು, ಅ.7: ನಗರದಲ್ಲಿ ಒಂಟಿ ಮಹಿಳೆಯರ ಕುತ್ತಿಗೆಯಿಂದ ಸರ ಎಳೆದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಳ್ಯ ಜಟ್ಟಿಪಳ್ಳದ ಮುಹಮ್ಮದ್ ನಿಸಾರ್ (25), ಸುಳ್ಯ ಗಾಂಧಿನಗರ ನಾವೂರು ನಿವಾಸಿ ಜುರೈಸ್ ಕೆ.ಎಂ. (22) ಎಂದು ಗುರುತಿಸಲಾಗಿದೆ.

ಇವರಿಂದ ಸರ ಕಳ್ಳತನಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ 21 ಗ್ರಾಂ ತೂಕದ ಎರಡು ಚಿನ್ನದ ಸರಗಳು ಮತ್ತು 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News