×
Ad

ಲೈನ್‌ಮ್ಯಾನ್ ಬಿದ್ದು ಗಾಯ

Update: 2016-10-07 23:17 IST

ಮಂಗಳೂರು, ಅ. 7: ನಗರದ ಕರಂಗಲ್ಪಾಡಿಯಲ್ಲಿ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಲೈನ್‌ಮ್ಯಾನ್‌ವೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಾಳುವನ್ನು ಉಮೇಶ್ (38) ಎಂದು ಗುರುತಿಸಲಾಗಿದೆ. ಕರಂಗಲ್ಪಾಡಿಯ ಅಲೋಶಿಯಸ್ ಶಾಲಾ ಆವರಣದಲ್ಲಿದ್ದ ಬೃಹತ್ ಮರವನ್ನು ಕಡಿಯುತ್ತಿದ್ದಾಗ ಮರ ಹೈಟೆನ್ಷನ್ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಕಂಪಿಸಿದ್ದು, ಅದರಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ನೆಲಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಉಮೇಶ್‌ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News