ಇಂದಿನ ಕಾರ್ಯಕ್ರಮ

Update: 2016-10-07 18:23 GMT

ಮಂಗಳೂರು ವಿವಿ ಕ್ರೀಡಾಕೂಟ: ಮಂಗಳೂರು ವಿವಿ ಮಟ್ಟದ ಅಂತರ ಕಾಲೇಜು 36ನೆ ಅಥ್ಲೆಟಿಕ್ ಕೂಟ ಹಾಗೂ ವಿಶೇಷ ಮಕ್ಕಳ ಕ್ರೀಡಾಕೂಟದ ಸಮಾರೋಪ ಸಮಾರಂಭ. ಸಮಯ: ಸಂಜೆ 4ಕ್ಕೆ. ಸ್ಥಳ: ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು ಉಡುಪಿ.
ತೀರ್ಪುಗಾರರ ಪರೀಕ್ಷೆ: ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯ ಕಬಡ್ಡಿ ತೀರ್ಪುಗಾರರ ಪರೀಕ್ಷೆ. ಸಮಯ: ಅಪರಾಹ್ನ 3ರಿಂದ. ಸ್ಥಳ: ಪುರಭವನ, ಅಜ್ಜರಕಾಡು ಉಡುಪಿ.
ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ: ಪರ್ಯಾಯ ಪೇಜಾವರ ಮಠದ ವತಿಯಿಂದ ಶರನ್ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ನಾಡೋಜ ಕೆ.ಎಸ್.ನಿಸ್ಸಾರ್ ಅಹ್ಮದ್‌ರಿಂದ ‘ನನ್ನ ಲೇಖನ ಉದ್ಯಮ’ ಹಾಗೂ ವಿಮರ್ಶಕ ಡಾ.ಸಿ. ಎನ್.ರಾಮಚಂದ್ರನ್‌ರಿಂದ ‘ಸ್ತೋತ್ರ ಸಾಹಿತ್ಯ’ ವಿಷಯಗಳ ಕುರಿತು ಉಪನ್ಯಾಸ. ಸಮಯ: ಸಂಜೆ 5ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ ಉಡುಪಿ.
 ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ಸಂಜೆ 4ಕ್ಕೆ ತುಮಕೂರಿನ ಬಾಲ ವಿಶ್ವನಾಥ್ ಮತ್ತು ತಂಡದಿಂದ ಭರತನಾಟ್ಯ, 5ರಿಂದ ಚಂದ್ರಶಾಲೆ ಪುರಾಣ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯ ಉಡುಪಿ ಇವರಿಂದ ಪ್ರವಚನ, 5ರಿಂದ ರಾಜಾಂಗಣದಲ್ಲಿ ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮ. ರಾತ್ರಿ 7ರಿಂದ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ.
ದಿಬ್ಬಣ-2016: ಕೋಟತಟ್ಟು ಗ್ರಾಪಂ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದೊಂದಿಗೆಡಾ.ಕಾರಂತ ಜನ್ಮದಿನೋತ್ಸವದ ಅಂಗವಾಗಿ ನಡೆದಿರುವ ‘ದಿಬ್ಬಣ-2016’ರಲ್ಲಿ ಸಂಜೆ 5:30ರಿಂದ ಸಭಾ ಕಾರ್ಯಕ್ರಮ, ಅಶ್ವಿನಿ ಪ್ರಭು ಮತ್ತು ಬಳಗದಿಂದ ನೃತ್ಯ ನಮನ, ಬಳಿಕ ಕುಂದಾಪ್ರ ಭಾಷೆಯ ಚಲನಚಿತ್ರ ಉತ್ಸವದಲ್ಲಿ ರಘು ಪಾಂಡೇಶ್ವರ ನಿರ್ಮಾಣದ ‘ಶವ’ ಹಾಗೂ ರಾಘವೇಂದ್ರ ಶಿರಿಯಾರ ನಿರ್ಮಾಣದ ‘ಅಣ್ಣು’ ಮತ್ತು ಇತರ ಕಿರುಚಿತ್ರಗಳ ಪ್ರದರ್ಶನ. ಸ್ಥಳ: ಕಾರಂತ ಥೀಮ್ ಪಾರ್ಕ್ ಕೋಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News