ಕ್ಯಾಂಪಸ್ ಫ್ರಂಟ್ ಹೆಸರು ದುರ್ಬಳಕೆ: ಕಾನೂನು ಹೋರಾಟದ ಎಚ್ಚರಿಕೆ.
Update: 2016-10-08 16:13 IST
ಮಂಗಳೂರು, ಅ.8: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿ ಕೆಲವು ಕಿಡಿಗೇಡಿಗಳು ಬಂಟ್ವಾಳ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿ ವೇತನದ ಹೆಸರಲ್ಲಿ ನಿಗದಿತ ಮೊತ್ತಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತನ್ನ ಕಚೇರಿಯನ್ನು ಹೊರತು ಪಡಿಸಿ, ಬೇರೆಲ್ಲಿಯೂ ವಿದ್ಯಾರ್ಥಿವೇತಕ್ಕೆ ಅರ್ಜಿ ಸಲ್ಲಿಸುವಿಕೆ ನಡೆಸುತ್ತಿಲ್ಲ. ಸಂಘಟನೆಯ ಹೆಸರನ್ನು ದುರುಪಯೋಗ ನಡೆಸಿದವರ ವಿರುದ್ಧ ಶ್ರೀಘ್ರವೇ ಕಾನೂನು ಹೋರಾಟ ನಡೆಸುವುದಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷ ಅಶ್ವಾನ್ ಸಾದಿಕ್ ಎಚ್ಚರಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ಹೆಸರನ್ನು ಬಳಸಿ ವಿದ್ಯಾರ್ಥಿ ವೇತನದ ನೆಪವಿಟ್ಟು ಹಣ ವಸೂಲಿ ಮಾಡುವ ವಿಚಾರ ಕಂಡು ಬಂದಲ್ಲಿ ತಕ್ಷಣವೇ ಸಂಘಟನೆಯ ಪ್ರತಿನಿಧಿಗಳನ್ನು ಅಥವಾ ಮೊ.ಸಂಖ್ಯೆ 7619248411ನ್ನು ಸಂಪರ್ಕಿಸಬೇಕಾಗಿ ಪ್ರಕಟನೆ ತಿಳಿಸಿದೆ.