ಚೀನಾದಲ್ಲಿ ಹಿಮ ಗುಹೆ !
Update: 2016-10-08 16:26 IST
ಬೀಜಿಂಗ್, ಅಕ್ಟೋಬರ್ 8: ಚೀನಾದಲ್ಲಿ ಮೂವತ್ತು ಲಕ್ಷ ವರ್ಷಗಳಿಗೂ ಮೊದಲು ನಿರ್ಮಿಸಲಾಗಿದೆ ಎನ್ನಲಾದ ಹಿಮಗುಹೆಯೊಂದು ಪತ್ತೆಯಾಗಿದ್ದು, ಇದು ಚೀನಾದ ಶಾನ್‌ಕ್ಷಿ ಪ್ರಾಂತದ ಉತ್ತರಭಾಗದಲ್ಲಿದೆ ಎಂದು ವರದಿಯಾಗಿದೆ. ಚೀನಾದ ಅತ್ಯಂತ ದೊಡ್ಡ ಹಿಮ ಗುಹೆ ಇದೆಂದು ಹೇಳಲಾಗಿದೆ.
ಲುಯ ಪರ್ವತದ ಫೆನ್‌ಹೆ ನದಿಗೆ ಸಮೀಪ ಇರುವ ಗುಹೆಯೊಳಗಿನಿಂದ ಮಂಜು ಗಡ್ಡೆಯನ್ನು ಹೊರತೆಗೆಯುವ ಕೆಲಸ ಪ್ರಗತಿಯಲ್ಲಿದೆ. ಇದು ಸಮುದ್ರಕ್ಕಿಂತ 2300 ಅಡಿ ಎತ್ತರದಲ್ಲಿದ್ದು 100ಮೀಟರ್ ಉದ್ದವಿದೆ. ನಮ್ಮ ಪೂರ್ವಜರಿಗೆ ಈ ಗುಹೆಯ ಬಗ್ಗೆ ಗೊತ್ತಿತ್ತು ಎಂದು ಗ್ರಾಮದ ನಿವಾಸಿಗಳು ಹೇಳಿದ್ದಾರೆ.
ಎರಡನೆ ಜಾಗತಿಕ ಯುದ್ಧದ ವೇಲೆ ಕೊಲ್ಲಲ್ಪಡುವ ಕುದುರೆಗಳನ್ನು ಇಲ್ಲಿ ಇರಿಸಲಾಗುತ್ತಿತ್ತು. ನಂತರ ಇದನ್ನು ಆಹಾರ ಶಾಲೆಯಾಗಿ ಬಳಸಲಾಯಿತು ಎಂದು ಗ್ರಾಮವಾಸಿಗಳು ಹೇಳುತ್ತಾರೆ. ಗುಹೆಯನ್ನು ಹೇಗೆ ನಿರ್ಮಿಸಲಾಗಿದೆ ಎಂದು ವಿಜ್ಞಾನಿಗಳು ಶೋಧನೆ ಆರಂಭಿಸಿದ್ದಾರೆಂದು ವರದಿಯಾಗಿದೆ.