×
Ad

ಇದು ಟ್ರಂಪ್ ಅಧ್ಯಕ್ಷೀಯ ಅಭಿಯಾನದ ಕೊನೆಯೇ?

Update: 2016-10-08 19:54 IST

ವಾಶಿಂಗ್ಟನ್, ಅ. 8: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸುದೀರ್ಘ ಇತಿಹಾಸದಲ್ಲಿ ಹಲವು ಚುನಾವಣಾ ಪ್ರಚಾರಗಳಲ್ಲಿ ಹಲವು ತಿರುವುಗಳು ಸಂಭವಿಸಿವೆ. ಅಮೆರಿಕದ ಹಲವು ವೀಕ್ಷಕರು ಹೇಳುವಂತೆ, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಂತಿಮವಾಗಿ ಬಂಡೆಯಿಂದ ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.

ಡೊನಾಲ್ಡ್ ಟ್ರಂಪ್ ಮಹಿಳೆಯರನ್ನು ಅಧೀನದಲ್ಲಿರುವವರು, ವಿನಿಮಯಗೊಳಿಸಬಹುದಾದವರು ಹಾಗೂ ಬೇಕಾದಂತೆ ಬಾಗಿಸಬಹುದಾದ ಆಟದ ವಸ್ತುಗಳು ಎಂಬಂತೆ ಪರಿಗಣಿಸಿದ ಬಳಿಕ, ಅಮೆರಿಕದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಹಿಲರಿ ಕ್ಲಿಂಟನ್ ಆಯ್ಕೆಯಾಗುವುದು ನಿಚ್ಚಳ ಎಂಬಂತೆ ಭಾಸವಾಗುತ್ತಿದೆ ಎಂಬುದಾಗಿ ‘ಪೊಲಿಟಿಕೊ’ದಲ್ಲಿ ಗ್ಲೆನ್ ತ್ರಶ್ ಮತ್ತು ಕ್ಯಾಟೀ ಗ್ಲುಯಕ್ ಬರೆದಿದ್ದಾರೆ.

ಸಾರ್ವಜನಿಕ ಚುನಾವಣಾ ಕಣದಲ್ಲಿರುವ ಯಾವುದೇ ವ್ಯಕ್ತಿ ಆಡದಿರುವ ತಮಾಷೆಯ, ಮನನೋಯಿಸುವ, ಸತ್ಯಾಂಶವಿಲ್ಲದ ಮಾತುಗಳನ್ನು ಟ್ರಂಪ್ ಈವರೆಗೆ ಆಡಿರಬಹುದು. ಆದರೆ, ತಾನು ಲೈಂಗಿಕ ಸಂಪರ್ಕ ಹೊಂದಬಯಸುವ ಮಹಿಳೆಯೊಬ್ಬರ ಬಗ್ಗೆ ಅವರು ಖಾಸಗಿಯಾಗಿ ಆಡಿರುವ ಮಾತುಗಳು ಅವೆಲ್ಲವನ್ನೂ ಹಿಂದಕ್ಕೆ ಹಾಕಿವೆ’’ ಎಂದು ಅವರು ಹೇಳುತ್ತಾರೆ.

‘ಕತೆ ಮುಗಿಯಿತು’
ಕಳೆದ ಕೆಲವು ವಾರಗಳಲ್ಲಿ ಟ್ರಂಪ್ ಮಾಡಿರುವ ಹಲವಾರು ಪ್ರಮಾದಗಳನ್ನು ಅವಿಕ್ ರಾಯ್ ‘ಫೋರ್ಬ್ಸ್’ನಲ್ಲಿ ಪಟ್ಟಿ ಮಾಡಿದ್ದಾರೆ.

‘‘ಆದರೆ, ಅವು ಯಾವದಕ್ಕೂ ಟ್ರಂಪ್‌ರನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಅನುಮೋದಿಸದಂತೆ ಆ ಪಕ್ಷದ ಸಂಸದರನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ, ಈಗಿನ ಈ ವೀಡಿಯೊ ಸಂಸದರನ್ನು ತಡೆಯಬಹುದು. ಯಾಕೆ?’’ ಎಂದು ಅವರು ಬರೆಯುತ್ತಾರೆ.

‘‘ಯಾವುದೇ ರಿಪಬ್ಲಿಕನ್ ಸಂಸದರು ಮುಸ್ಲಿಮ್ ಸಂಬಂಧಿಕರನ್ನು ಹೊಂದಿಲ್ಲ. ಯಾವುದೇ ರಿಪಬ್ಲಿಕನ್ ಸಂಸದರು ಮೆಕ್ಸಿಕೊ ವಂಶಸ್ಥರಲ್ಲ. ಯಾವುದೇ ರಿಪಬ್ಲಿಕನ್ ಸಂಸದರು ತಮ್ಮ ಚರ್ಮದ ಆಧಾರದಲ್ಲಿ ತಾರತಮ್ಯವನ್ನು ಎದುರಿಸಿಲ್ಲ. ಆದರೆ, ಅವರೆಲ್ಲರೂ ಬಿಳಿ ಮಹಿಳಾ ಸಂಬಂಧಿಗಳನ್ನು ಹೊಂದಿದ್ದಾರೆ. ಆದರೆ, ಬಿಳಿಯ ಮಹಿಳೆಯರ ಮರ್ಮಾಂಗವನ್ನು ಹಿಡಿದು ಎಳೆಯುತ್ತೇನೆ ಎಂಬುದಾಗಿ ಟ್ರಂಪ್ ಹೇಳುವಾಗ, ಅದು ಅವರ ಮಹಿಳೆಯರತ್ತಲೇ ತಿರುಗುತ್ತದೆ’’ ಎಂದು ಅವಿಕ್ ರಾಯ್ ಬರೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News