×
Ad

ಬೈಕ್, ಶೆಡ್‌ನ್ನು ಆಹುತಿ ತೆಗೆದುಕೊಂಡ ಬ್ಯಾಟರಿ

Update: 2016-10-08 20:00 IST

ಬಂಟ್ವಾಳ, ಅ. 8: ಶೆಡ್‌ನಲ್ಲಿ ನಿಲ್ಲಿಸಿದ್ದ ಬೈಕ್‌ನ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಶೆಡ್ ಮತ್ತು ಬೈಕ್‌ಗೆ ಬೆಂಕಿ ತಗಲಿ ಸಂಪೂರ್ಣವಾಗಿ ಭಸ್ಮಗೊಂಡಿರುವ ಘಟನೆ ಅಳಿಕೆ ಗ್ರಾಮದ ಮಡಿಯಾಲದಲ್ಲಿ ಶನಿವಾರ ಬೆಳಗ್ಗಿನ ಜಾವ ಸಂಭವಿಸಿದೆ.

ಅಳಿಕೆ ಗ್ರಾಮದ ಮಡಿಯಾಲ ಗೋಪಾಲಕೃಷ್ಣ ಭಟ್ ಎಂಬವರ ಪುತ್ರ ತಿರುಮಲೇಶ್ವರ ಭಟ್‌ಗೆ ಸೇರಿದ ಬೈಕ್ ಇದಾಗಿದೆ.

ಮನೆಯ ಪಕ್ಕದಲ್ಲೇ ಇರುವ ಶೆಡ್‌ನಲ್ಲಿ ತಿರುಮಲೇಶ್ವರ ಭಟ್ ಎಂದಿನಂತೆ ನಿನ್ನೆ ರಾತ್ರಿ ಕೂಡಾ ತನ್ನ ಪಲ್ಸರ್ ಬೈಕನ್ನು ನಿಲ್ಲಿಸಿದ್ದರು. ಬೆಳಗ್ಗಿನ ಜಾವ ಸುಮಾರು 5 ಗಂಟೆಯ ವೇಳೆಗೆ ಶೆಡ್ ಬೆಂಕಿಯಿಂದ ಉರಿಯುತ್ತಿರುವ ಶಬ್ದಕ್ಕೆ ಮನೆ ಮಂದಿ ಎಚ್ಚರಗೊಂಡಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ.

ಘಟನೆಯಿಂದ ಶೆಡ್ ಮತ್ತು ಬೈಕ್ ಸಂಪೂರ್ಣವಾಗಿ ಸ್ಮಗೊಂಡಿದ್ದು ಶೆಡ್‌ನಲ್ಲಿಟ್ಟಿದ್ದ ನೂರಾರು ತೆಂಗಿನ ಕಾಯಿ ಸುಟ್ಟು ಕರಕಲಾಗಿದೆ. ಬೈಕ್‌ನ ಬ್ಯಾಟರಿಯ ತಂತಿಯನ್ನು ಇಲಿ ಕತ್ತರಿಸಿದ ಪರಿಣಾಮ ಶಾರ್ಟ್ ಸರ್ಕ್ಯೂಟ್‌ನಿಂದ ಬಾಟರಿ ಸ್ಫೋಟಗೊಂಡಿರಬಹುದು ಎಂದು ಮನೆ ಮಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News