ಸಹಕೈದಿಗಳ ಮೇಲೆ ಹಲ್ಲೆ ನಡೆಸುತ್ತಿದ್ದ ಐವರು ಬೆಂಗಳೂರು ಜೈಲಿಗೆ
Update: 2016-10-08 22:03 IST
ಮಂಗಳೂರು, ಅ.8:ಮಂಗಳೂರು ಸಬ್‌ಜೈಲ್‌ನಲ್ಲಿ ಸಹ ಕೈದಿಗಳ ಮೇಲೆ ಹಲ್ಲೆ ನಡೆಸುತ್ತಿದ್ದ ಐವರು ಕೈದಿಗಳನ್ನು ಬೆಂಗಳೂರು ಜೈಲಿಗೆ ಕಳುಹಿಸಲಾಗಿದೆ.
ಮುಹಮ್ಮದ್ ರ್ಸಾಜ್, ಇರ್ಷಾದ್, ವಿಜಯ್ ಮಂಕಿಸ್ಟ್ಯಾಂಡ್, ಸುಶೀಲ್ ಕುಮಾರ, ಚರಣ್ ಶೇಟ್ ಮಂಗಳೂರು ಜೈಲಿನಿಂದ ಸ್ಥಳಾಂತರಗೊಂಡ ಕೈದಿಗಳು.
ಈ ಕೈದಿಗಳ ಪೈಕಿ ಮುಹಮ್ಮದ್ ರ್ಸಾಜ್ ಮತ್ತು ಇರ್ಷಾದ್ ಇತ್ತೀಚೆಗೆ ಜೈಲಿನಲ್ಲಿ ಸಹಕೈದಿ ನೌಷಾದ್‌ನ ಮೇಲೆ ಹಲ್ಲೆ ನಡೆದ ಪ್ರಕರಣ ಆರೋಪಿಗಳಾಗಿದ್ದಾರೆ.
ಉಳಿದ ಆರೋಪಿಗಳು ಜೈಲಿನಲ್ಲಿ ಇತರ ಕೈದಿಗಳಿಗೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಲ್ಲದೆ, ಬೆದರಿಕೆ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.