×
Ad

ಕುಂಪನಮಜಲು ನೂತನ ಮಸೀದಿಗೆ ಶಿಲಾನ್ಯಾಸ

Update: 2016-10-09 23:41 IST

ಫರಂಗಿಪೇಟೆ,ಅ.9: ತಾಲೂಕಿನ ಪುದು ಗ್ರಾಮದ ಕುಂಪನಮಜಲಿನಲ್ಲಿ ನೂತನ ಅರಫಾ ಮಸೀದಿಗೆ ರವಿವಾರ ಶಿಲಾನ್ಯಾಸ ನೆರವೇರಿತು.
ಸಮಸ್ತ ಮುಶಾವರ ಸಮಿತಿ ಸದಸ್ಯ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಶಿಲಾನ್ಯಸಗೈದರು.
ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಿದರು.
ಅತಿಥಿಗಳಾಗಿ ಹೈದರ್ ಪರ್ತಿಪ್ಪಾಡಿ, ಎಫ್.ಎ.ಖಾದರ್, ಜಿಪಂ ಮಾಜಿ ಸದಸ್ಯ ಫಾರೂಕ್ ಬಶೀರ್ ಟಿ.ಕೆ., ಎಂ.ಜೆ.ಎಂ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಮಸೀದಿ ಕಟ್ಟಡ ದಾನಿಗಳಾದ ಶರೀಫ್ ವೈಟ್‌ಸ್ಟೋನ್ ಡೆವಲಪರ್ಸ್ ಮಂಗಳೂರು, ಹಸನ್ ಮಂಗಳೂರು ಮತ್ತು ಗುತ್ತಿಗೆದಾರರಾದ ಮುಶ್ತಾಕ್ ಶೇಕ್, ಉಸ್ಮಾನ್, ಅಶ್ರಫ್, ಇಂಜಿನಿಯರ್ ರಿಯಾಝ್ ಆಲಮ್ ಉಪಸ್ಥಿತರಿದ್ದರು
ಫರಂಗಿಪೇಟೆ ಎಂ.ಜೆ.ಎಂ.ಮಸೀದಿ ಮುದರ್ರಿಸ್ ಅಬೂ ಝಾಹಿರ್ ಉಸ್ಮಾನ್ ದಾರಿಮಿ, ಅರಫಾ ಮಸೀದಿ ಅಧ್ಯಕ್ಷ ಇಕ್ಬಾಲ್ ದರ್ಬಾರ್, ಉಪಾಧ್ಯಕ್ಷ ಬುಖಾರಿ, ಪ್ರಧಾನ ಕಾರ್ಯದರ್ಶಿ ಶರೀಫ್ ಕೆ., ಕಾರ್ಯದರ್ಶಿ ಅಬ್ದುಲ್ಲಾ, ಸಮಿತಿ ಸದಸ್ಯರಾದ ಯಾಕೂಬ್, ಸಲೀಮ್ ಕೆ., ಮಯ್ಯದ್ದಿ, ರಿಯಾಝ್, ಮಾಲಿಕ್, ಅಶ್ರಫ್, ಇಸಾಕ್, ಇಬ್ರಾಹೀಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News