ಶೇ.28ರಷ್ಟು ಭೂಪ್ರದೇಶ ಕಳೆದುಕೊಂಡ ಐಸಿಸ್
ಲಂಡನ್, ಅ.9: ಭಯೋತ್ಪಾದಕ ಸಂಘಟನೆ ಐಸಿಸ್ ಕಳೆದ ವರ್ಷದಿಂಚೀಗೆ ಸಿರಿಯ ಹಾಗೂ ಇರಾಕ್‌ನಲ್ಲಿ ತನ್ನ ಸ್ವಾೀನದಲ್ಲಿದ್ದ ಶೇ.28ರಷ್ಟು ಪ್ರಾಂತವನ್ನು ಕಳೆದುಕೊಂಡಿದೆಯೆಂದು ಭದ್ರತಾ ಹಾಗೂ ರಕ್ಷಣಾ ವಿಶ್ಲೇಷಕರು ಪ್ರಕಟಿಸಿದ ದತ್ತಾಂಶ ವರದಿಯೊಂದು ಬಹಿರಂಗಪಡಿಸಿದೆ.
ಇರಾಕ್ ಹಾಗೂ ಸಿರಿಯದಲ್ಲಿ ಐಸಿಸ್‌ನ ವಶದಲ್ಲಿದ್ದ 90,800 ಚ.ಕಿ.ಮೀ. ಭೂಪ್ರದೇಶವು 2015ರಲ್ಲಿ 78 ಸಾವಿರ ಚ.ಕಿ.ಮೀ.ಗೆ ಕುಸಿದಿದ್ದು, ಶೇ.14ರಷ್ಟು ಪ್ರಾಂತವನ್ನು ಕಳೆದುಕೊಂಡಿತ್ತು. ಈ ವರ್ಷದ ಮೊದಲ 9 ತಿಂಗಳುಗಳಲ್ಲಿ ಐಸಿಸ್ ಪ್ರಾಂತವು 78 ಸಾವಿರ ಚ.ಕಿ.ಮೀ.ಗಳಿಂದ 65,500 ಚ.ಕಿ.ಮೀ.ಗೆ ಕುಸಿಯಿತೆಂದು ಐಎಚ್‌ಎಸ್ ವಿಶ್ಲೇಷಕರು ಹೇಳಿದ್ದಾರೆ.
ಈ ವರ್ಷದ ಅಕ್ಟೋಬರ್ ವೇಳೆಗೆ ಐಸಿಸ್ ಇರಾಕ್ ಹಾಗೂ ಸಿರಿಯದಲ್ಲಿ ಹೆಚ್ಚುಕಡಿಮೆ 68,300 ಕಿ.ಮೀ. ಭೂಪ್ರದೇಶದ ಮೇಲೆ ನಿಯಂತ್ರಣವನ್ನು ಹೊಂದಿದೆಯೆಂದು ಅದು ಹೇಳಿದೆ.
ಈ ವರ್ಷದ ಜುಲೈನಿಂದೀಚೆಗೆ ಸಾಧಾರಣ ಪ್ರಮಾಣದಷ್ಟು ಭೂಪ್ರದೇಶವು ಐಸಿಸ್‌ನಿಂದ ಕೈತಪ್ಪಿಹೋಗಿದೆಯಾದರೂ, ಆಯಕಟ್ಟಿನ ದೃಷ್ಟಿಯಿಂದ ಅವು ಮಹತ್ವದ್ದಾಗಿವೆ.