×
Ad

ಅಜೇಯ ಶತಕ ಬಾರಿಸಿದ "ಎಂ.ಎಸ್.ಧೋನಿ"

Update: 2016-10-10 09:38 IST

ಮುಂಬೈ, ಅ.10: "ಎಂ.ಎಸ್.ಧೋನಿ" ವಿಶಿಷ್ಟ ಶತಕ ಬಾರಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಾಯಕನಟರಾಗಿರುವ "ಎಂ.ಎಸ್.ಧೋನಿ- ದ ಅನ್‌ಟೋಲ್ಡ್ ಸ್ಟೋರಿ" ಚಿತ್ರದ ಒಂಬತ್ತು ದಿನಗಳ ಬಾಕ್ಸ್ ಆಫೀಸ್ ಗಳಿಕೆ ನೂರು ಕೋಟಿ ರೂಪಾಯಿಯನ್ನು ದಾಟಿದೆ. ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುಶಾಂತ್ ಸಿಂಗ್ ಅವರ ಗರಿಷ್ಠ ಗಳಿಕೆಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಾಲಿವುಡ್ ವಹಿವಾಟು ವಿಶ್ಲೇಷಕ ತರುಣ್ ಆದರ್ಶ್ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಇದು ಹಿಂದಿ, ತಮಿಳು ಹಾಗೂ ತೆಲುಗು ಅವತರಣಿಕೆಗಳ ಒಟ್ಟು ಮೊತ್ತವಾಗಿದೆ. ಈ ವರ್ಷ 100 ಕೋಟಿ ಗಳಿಕೆಯ ಗೆರೆ ದಾಟಿದ ಹಿಂದಿ ಚಿತ್ರಗಳನ್ನೂ ಅವರು ಪಟ್ಟಿ ಮಾಡಿದ್ದಾರೆ. ಇದರಲ್ಲಿ ಅಕ್ಷಯ್ ಕುಮಾರ್ ಅವರ ಏರ್‌ಲಿಫ್ಟ್, ರುಸ್ತುಂ ಮತ್ತು ಹೌಸ್‌ಫುಲ್-3, ಸಲ್ಮಾನ್ ಖಾನ್ ಅವರ ಸುಲ್ತಾನ್ ಮತ್ತು ಎಂ.ಎಸ್.ಧೋನಿ ಬಯೋಪಿಕ್ ಸೇರಿದೆ. 100 ಕೋಟಿ ಗಳಿಕೆ ಕ್ಲಬ್ ಸೇರಲು ತೆಗೆದುಕೊಂಡ ದಿನಗಳನ್ನು ಕೂಡಾ ತರುಣ್ ಉಲ್ಲೇಖಿಸಿದ್ದಾರೆ.
ಎಂ.ಎಸ್.ಧೋನಿ ಚಿತ್ರ ಕೇವಲ ಒಂದೇ ವಾರದಲ್ಲಿ ಎಲ್ಲ ವೆಚ್ಚವನ್ನು ಭರಿಸಿಕೊಂಡಿದೆ. 5,000 ತೆರೆಗಳಲ್ಲಿ ಇದು ಬಿಡುಗಡೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News