ಕಡಬ: ಸಾರ್ವಜನಿಕ ಶೌಚಾಲಯಕ್ಕೆ ಗುದ್ದಲಿ ಪೂಜೆ
ಕಡಬ, ಅ.11. ಸಾರ್ವಜನಿಕ ಶೌಚಾಲಯ ಸಮಸ್ಯೆಯನ್ನು ಎದುರಿಸುತ್ತಿದ್ದ ಕಡಬ ಪೇಟೆಯಲ್ಲಿ ಸಾರ್ವಜನಿಕ ಸುಸಜ್ಜಿತ ಶೌಚಾಲಯ ನಿರ್ಮಿಸಲು ಸರಕಾರದ ನಿರ್ಮಲ ಗ್ರಾಮ ಯೋಜನೆಯಡಿ 4 ಲಕ್ಷ ಅನುದಾನ ಮಂಜೂರಾಗಿದ್ದು ಇದಕ್ಕೆ ಕಡಬ ಗ್ರಾ.ಪಂ.ನಿಂದ 10% ಸೇರಿಸಿ ಉತ್ತಮ ಶೌಚಾಲಯ ನಿರ್ಮಿಸಲಾಗುತ್ತಿದೆ.
ಕಡಬ ಜಿ.ಪಂ. ಸದಸ್ಯ ಪಿ.ಪಿ ವರ್ಗೀಸ್ ಹಾಗೂ ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮೊಗೇರರವರು ನೂತನ ಶೌಚಾಲಯಕ್ಕೆ ಸೋಮವಾರದಂದು ಗುದ್ದಲಿ ಪೂಜೆ ನೆರವೇರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಡಬ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕುಟ್ರುಪ್ಪಾಡಿ ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ ಕೋಲ್ಪೆ, ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಎ.ಎಸ್ ಶೆರೀಫ್, ಕೃಷ್ಣಪ್ಪ ಪೂಜಾರಿ, ಜಯಂತಿ ಗಣಪಯ್ಯ, ರೇವತಿ, ನೇತ್ರಾ, ಇಂದಿರಾ, ಮಾಧವ, ಸರೋಜಿನಿ ಎಸ್ ಆಚಾರ್, ಸತೀಶ್ ನಾಕ್ ಮೇಲಿನಮನೆ, ಗುತ್ತಿಗೆದಾರರಾದ ಉಸ್ಮಾನ್ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಗುರುರಾಜ್ ಭಟ್ ಪೂಜಾ ವಿಧಿ ವಿಧಾನಗಳನ್ನು ನಡೆಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಆನಂದ ಎ ವಂದಿಸಿದರು. ಸಿಬ್ಬಂದಿಗಳಾದ ಪದ್ಮಯ್ಯ, ಹರೀಶ್ ಸಹಕರಿಸಿದರು.