ಪ್ರಕಾಶ್ ಮಲ್ಯಗೆ ಕೆ.ಕೆ.ಪೈ ರಾ. ಬ್ಯಾಂಕಿಂಗ್ ಪ್ರಶಸ್ತಿ ಪ್ರದಾನ
ಮಣಿಪಾಲ, ಅ.11: ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್‌ನಿಂದಾಗಿ ಇಂದು ಬ್ಯಾಂಕ್‌ಗಳ ಮಾರುಕಟ್ಟೆಗಳು ವಿಶಾಲವಾಗುತ್ತಿವೆ. ಇದರಿಂದ ಬ್ಯಾಂಕ್ ರಹಿತ ಬ್ಯಾಂಕಿಂಗ್ ಸಾಧ್ಯತೆಯ ಭವಿಷ್ಯ ನಿಜಗೊಳ್ಳುವ ಹಾದಿಯಲ್ಲಿದೆ ಎಂದು ವಿಜಯ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪ್ರಕಾಶ್ ಪಿ. ಮಲ್ಯ ಅಭಿಪ್ರಾಯ ಪಟ್ಟಿದ್ದಾರೆ.
ಆರು ದಶಕಗಳ ಹಿಂದೆಯೇ ಮಾಜಿ ಕೇಂದ್ರ ಸಚಿವ ದಿ.ಟಿ.ಎ.ಪೈ ಪ್ರಸ್ತಾಪಿಸಿದ್ದ ಬ್ಯಾಂಕುಗಳ ವಿಲೀನ ಪ್ರಸ್ತಾಪ ಇಂದು ನಿಜವಾಗುವ ಹಂತದಲ್ಲಿದೆ. 1950ರಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದ ಟಿ.ಎ.ಪೈ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕುಗಳ ವಿಲೀನದ ಪ್ರಸ್ತಾಪವನ್ನು ಮೊದಲ ಬಾರಿ ಮುಂದಿಟ್ಟಿದ್ದರು ಎಂದು ಮಲ್ಯ ನುಡಿದರು.
ಭವಿಷ್ಯದ ಬ್ಯಾಂಕಿಂಗ್:
ಮಾಹಿತಿ ತಂತ್ರಜ್ಞಾನದಿಂದ ಖರ್ಚು ಕಡಿಮೆಯಾಗುತ್ತಿದೆ. ಪೈಪೋಟಿ ಹೆಚ್ಚಾಗಿ ವ್ಯಾಪಾರ, ಲಾಭಾಂಶವೂ ಹೆಚ್ಚುತ್ತಿವೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಕಡೆಗಣಿಸಲಾಗುತ್ತಿದ್ದು ಇವಕ್ಕೆ ಹೆಚ್ಚಿನ ಒತ್ತು ಸಿಗಬೇಕು. ಮಾನವ ಸಂಪನ್ಮೂಲದ ಅಭಿವೃದ್ಧಿ ಹೊಸ ಸವಾಲುಗಳಲ್ಲಿ ಒಂದಾಗಿದೆ ಎಂದರು.
ಮಾಹಿತಿ ತಂತ್ರಜ್ಞಾನದಿಂದ ಖರ್ಚು ಕಡಿಮೆಯಾಗುತ್ತಿದೆ. ಪೈಪೋಟಿ ಹೆಚ್ಚಾಗಿ ವ್ಯಾಪಾರ, ಲಾಾಂಶವೂಹೆಚ್ಚುತ್ತಿವೆ.ಸಣ್ಣಮತ್ತುಮ್ಯಮ ಪ್ರಮಾಣದ ಕೈಗಾರಿಕೆಗಳನ್ನು ಕಡೆಗಣಿಸಲಾಗುತ್ತಿದ್ದು ಇವಕ್ಕೆ ಹೆಚ್ಚಿನ ಒತ್ತು ಸಿಗಬೇಕು. ಮಾನವ ಸಂಪನ್ಮೂಲದ ಅಭಿವೃದ್ಧಿ ಹೊಸ ಸವಾಲುಗಳಲ್ಲಿ ಒಂದಾಗಿದೆ ಎಂದರು.
ಅನುತ್ಪಾದಕ ಆಸ್ತಿ: ಈಗ ಬ್ಯಾಂಕುಗಳು ಇದಿರಿಸುತ್ತಿರುವ ಸಮಸ್ಯೆಗಳಲ್ಲಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಒಂದಾಗಿದೆ. ಎನ್‌ಪಿಎ ಪ್ರಮಾಣ ಇಳಿಮುಖ ಕ್ಕೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸುಮಾರು ಎರಡು ತ್ರೈಮಾಸಿಕಗಳಲ್ಲಿ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಪ್ರಮಾಣ ಗಣನೀಯವಾಗಿ ಇಳಿಯಲಿದೆ ಎಂದು ಪ್ರಕಾಶ್ ಮಲ್ಯ ನುಡಿದರು.
ಟ್ರಸ್ಟ್‌ನ ಅಧ್ಯಕ್ಷ ಟಿ.ಸತೀಶ್ ಯು. ಪೈ ಪ್ರಶಸ್ತಿ ಪ್ರದಾನ ಮಾಡಿದರು. ಟ್ರಸ್ಟಿ ಡಾ.ಎಚ್.ಎಸ್.ಬಲ್ಲಾಳ್ ಶುಭ ಹಾರೈಸಿದರು. ಟ್ರಸ್ಟಿ ಕೆ.ಎಂ.ಉಡುಪ ಸ್ವಾಗತಿಸಿದರೆ, ಕಾರ್ಯದರ್ಶಿ ಡಾ.ಕೆ.ಕೆ.ಅಮ್ಮಣ್ಣಾಯ ಕಾರ್ಯಕ್ರಮ ನಿರ್ವಹಿಸಿ ಮಲ್ಯರನ್ನು ಪರಿಚಯಿಸಿದರು.ಭಾರತೀಯ ವಿಕಾಸ ಟ್ರಸ್ಟ್ ಸಿಇಒ ಮನೋಹರ ಕಟ್ಕೇರಿ ವಂದಿಸಿದರು. ಟ್ರಸ್ಟಿ ಟಿ.ಅಶೋಕ್ ಪೈ, ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರ ಮಹಾ ಪ್ರಬಂಧಕ ಸತೀಶ್ ಕಾಮತ್ ಉಪಸ್ಥಿತರಿದ್ದರು.