×
Ad

ಮುಲ್ಕಿ: ಅಂತರ್ ಜಿಲ್ಲಾ ಮಟ್ಟದ ಕರ್- ಕಬ್ಬಡಿ ಪಂದ್ಯಾಕೂಟ

Update: 2016-10-11 19:22 IST

ಮುಲ್ಕಿ, ಅ.11: ರಾಜ್ಯಾದ್ಯಂತ ಪಟ್ಟಣ ಪ್ರದೇಶಗಳಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ಪಡಿತರ ವಿತರಣೆ ಆರಂಭವಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಆನ್‌ಲೈನ್ ಮೂಲಕ ಪಡಿತರ ವಿಸ್ತರಣೆಗೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಆಹಾರ ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.
 ಅವರು ಮುಲ್ಕಿಯ ಕಾರ್ನಾಡ್ ಗಾಂಧೀ ಮೈದಾನದಲ್ಲಿ ಯುನೈಟೆಡ್ ಸ್ಪೋಟ್ಸ್ ಪೆಟ್ರೋನೆಟ್ ಎಸೋಸಿಯೇಶನ್ ವತಿಯಿಂದ ನಡೆದ ಅಂತರ್ ಜಿಲ್ಲಾ ಮಟ್ಟದ ಕರ್- ಕಬ್ಬಡಿ ಪಂದ್ಯಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
 ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಬಡವರ ಅಬಿವೃದ್ಧಿಗೆ ಶ್ರಮಿಸುತ್ತಿದ್ದು ಪಡಿತರದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.
ಬಳಿಕ ಮಾತನಾಡಿದ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಕಬ್ಬಡಿ ಪಂದ್ಯಾಟಕ್ಕೆ ಉತ್ತೇಜನ ನೀಡಲು ಸರಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡಾಳುಗಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸಲಾಗುವುದು ಎಂದರು.
 ದ.ಕ.ಜಿಲ್ಲಾ ಅಮೆಚೂರು ಕಬಡಿ ಎಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ಕರ್ನಾಟಕ ಸರಕಾರದ ವಿಧಾನ ಸಬೆಯ ಮುಖ್ಯ ಸಚೇತಕ ಐವನ್ ಡಿಸೋಜ,ದ.ಕ.ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಮಿಥುನ್ ರೈ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯರಾದ ಬಿ.ಎಂ. ಆಸೀಫ್, ಪುತ್ತುಬಾವ, ಬಶೀರ್ ಕುಳಾಯಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ದನಂಜಯ ಮಟ್ಟು, ಉದ್ಯಮಿ ಇಕ್ಬಾಲ್ ಅಹ್ಮದ್, ಕಬಡ್ಡಿ ಕ್ರೀಡಾಪಟು ಜಗದೀಶ್ ಕುಂಬ್ಳೆ, ಮುನೀರ್ ಕಾರ್ನಾಡ್, ಅಬ್ದುಲ್ ಕಲಾಂ ಕನ್ನಂಗಾರ್, ಹಕೀಂ ಕಾರ್ನಾಡ್,ಪ್ರಬೋದ್ ಕುಡ್ವ, ಪುರುಷೋತ್ತಮ, ಅಶೋಕ್ ಪೂಜಾರ,ಅಬ್ದುಲ್ ಖಾದರ್ ಹಳೆಯಂಗಡಿ, ಸಾಹುಲ್ ಹಮೀದ್, ಅಶ್ರಫ್ ಕರ್ನೀರೆ ಹಾಗೂ ಕಬಡಿ ಎಸೋಸಿಯೇಶನ್‌ನ ಪಧಾಧಿಕಾರಿಗಳಾದ ಕಬೀರ್, ನಿತಿನ್ ಮುಲ್ಕಿ, ಶಬೀರ್ ಎಚ್, ಶಮೀರ್ ಎ.ಎಚ್., ರಿಯಾಝ್ ಮತ್ತಿತರರಿದ್ದರು.
  ಅಂತಿಮ ಅನಾಹಣಿಯಲ್ಲಿ ಆಳ್ವಾಸ್ ಮೂಡಬಿದ್ರೆ ತಂಡ ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ತಂಡವನ್ನು 26-22 ಅಂತರದಿಂದ ಮಣಿಸಿ ಕರ್-ಕಬ್ಬಡಿ-2016 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News