×
Ad

ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಯ ವೈಖರಿ ಶ್ಲಾಘನೀಯ:ಅಭಯಚಂದ್ರ ಜೈನ್

Update: 2016-10-11 19:38 IST

ಮುಲ್ಕಿ,ಅ.11: ಹಿಂದಿನ ಕಾಲದಿಂದಲೂ ಪಟ್ಟಣ ಸಹಿತ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆ ಮಹತ್ತರ ವಹಿಸಿದ್ದು ಗ್ರಾಹಕರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಅಭಯಚಂದ್ರ ಜೈನ್ ಹೇಳಿದರು.

 ಅವರು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲೊಟ್ಟು ಎಂಬಲ್ಲಿ ಸ್ಥಳಾಂತರಗೊಂಡ ನೂತನ ಅಂಚೆ ಕಚೇರಿಯ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಾರದಾವಸಂತ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಅತಿಕಾರಿಬೆಟ್ಟು ಗ್ರಾ.ಪಂ. ಉಪಾದ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಮುಲ್ಕಿ ಅಂಚೆಪಾಲಕ ಭವಾನಿ ಶಂಕರ ಯಂ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಎಜಿಎಂ ಜಿ.ಜಿ. ಕಾಮತ್, ಮುಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ನಾರಾಯಣ ಶಣೈ, ಅತಿಕಾರಿಬೆಟ್ಟು ಅಂಚೆಪಾಲಕಿ ಸವಿತಾ ದೇವಿ, ಎನ್. ವಿಷ್ಣುದಾಸ್ ಭಟ್, ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯರುಗಳಾದ ಮನೋಹರ ಕೋಟ್ಯಾನ್, ದಯಾನಂದ ಮಟ್ಟು, ಉದ್ಯಮಿ ಗಂಗಾಧರ ಶೆಟ್ಟಿ ಬರ್ಕೆತೋಟ, ರವೀಂದ್ರ ಪ್ರಭು ಮೈಲೊಟ್ಟು ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News