ನದಿಯಲ್ಲಿ ಮುಳುಗಿ ಮಣಿಪಾಲ ವಿದ್ಯಾರ್ಥಿ ಮೃತ್ಯು
Update: 2016-10-11 20:53 IST
ಮಣಿಪಾಲ, ಅ.11: ಇಲ್ಲಿನ ಎಂಡ್‌ಪಾಯಿಂಟ್‌ನಲ್ಲಿರುವ ಸ್ವರ್ಣ ನದಿ ಯಲ್ಲಿ ಈಜುತ್ತಿದ್ದ ಮಣಿಪಾಲ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.10ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಚಂಡಿಗಡ್ ನಿವಾಸಿ, ಮಣಿಪಾಲ ವಿವಿಯ ಐಕಾಸ್ ವಿದ್ಯಾರ್ಥಿ ಅನುದೇವ್(19) ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತ ರಾದ ಕಾರ್ತಿಕ್, ಇವನ್ನ್ ಗುಪ್ತಾ, ಪಾರ್ಥಿವ, ಆಯುಷ್ ಹಾಗೂ ಇತರ ರೊಂದಿಗೆ ಬೆಳಗಿನ ಜಾವ ಎಂಡ್ ಪಾಯಿಂಟ್‌ಗೆ ಹೋಗಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ಅಲ್ಲಿರುವ ಸ್ವರ್ಣ ನದಿಯಲ್ಲಿ ಈಜುತ್ತಿರುವಾಗ ಅನುದೇವ ಸ್ವಲ್ಪಮುಂದೆ ಹೋಗಿ ನೀರಿನಲ್ಲಿ ಡೈವ್ ಮಾಡುತ್ತಿದ್ದಾಗ ಆಕಸ್ಮಿಕ ವಾಗಿ ನೀರಿನಲ್ಲಿ ಮುಳುಗಿದನು.
ಸ್ಥಳೀಯರ ಸಹಾಯದಿಂದ ಕೂಡಲೇ ಅವನನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬೆಳಗ್ಗೆ 9ಗಂಟೆ ಸುಮಾರಿಗೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.