×
Ad

ಜಯಲಲಿತಾರ ಸಚಿವಖಾತೆ ನಿರ್ವಹಣೆ ಹೊಣೆ ಪನ್ನೀರ್‌ಸೆಲ್ವಂಗೆ

Update: 2016-10-11 22:07 IST

ಚೆನ್ನೈ, ಅ.11: ಮುಖ್ಯಮಂತ್ರಿ ಜಯಲಲಿತಾ ಅವರು ಹೊಂದಿದ್ದ ಸಚಿವಖಾತೆಗಳ ನಿರ್ವಹಣೆಯ ಹೊಣೆಯನ್ನು ವಿತ್ತಸಚಿವ ಒ.ಪನ್ನೀರ್‌ಸೆಲ್ವಂ ಅವರಿಗೆ ವಹಿಸಿಕೊಡಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಅವರೇ ಮುಂದುವರಿಯಲಿದ್ದಾರೆ.

ಜಯಲಲಿತಾ ಅವರು ನಾಗರಿಕ, ಐಎಎಸ್, ಐಪಿಎಸ್, ಐಎಫ್‌ಎಸ್, ಸಾರ್ವಜನಿಕ ಆಡಳಿತ, ಜಿಲ್ಲಾ ಕಂದಾಯ ಅಧಿಕಾರಿಗಳು, ಪೊಲೀಸ್ ಮತ್ತು ಗೃಹ ಇಲಾಖೆಯನ್ನು ನಿಭಾಯಿಸುತ್ತಿದ್ದರು. ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನೂ ಪನ್ನೀರ್‌ಸೆಲ್ವಂ ಅವರೇ ವಹಿಸಲಿದ್ದಾರೆ. ಮುಖ್ಯಮಂತ್ರಿಯವರ ಸಲಹೆ ಮೇರೆಗೆ ಈ ವ್ಯವಸ್ಥೆ ಮಾಡಲಾಗಿದ್ದು ಅವರು ಚೇತರಿಸಿಕೊಂಡು ಕಾರ್ಯ ನಿರ್ವಹಿಸಲು ಶಕ್ತರಾಗುವವರೆಗೆ ಈ ವ್ಯವಸ್ಥೆ ಚಾಲ್ತಿಯಲಿರುತ್ತದೆ ಎಂದು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News