ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ
Update: 2016-10-11 23:43 IST
ಉಡುಪಿ, ಅ.11: ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲ ಜಾಹೀರಾತು ದಾರರು ತಮ್ಮ ಪ್ರಚಾರ ಫಲಕಗಳಿಗೆ ಅನುಮತಿ ಸಂಖ್ಯೆ ಮತ್ತು ಅವಧಿಯನ್ನು ದಾಖಲಿಸಿ ಜಾಹೀರಾತು ಅಳವಡಿಸಬೇಕು ಎಂದು ಪೌರಾಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ. ಅನಧಿಕೃತ ಫಲಕಗಳು ಕಂಡುಬಂದಲ್ಲಿ ತೆರವು ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.