×
Ad

ರಾಜ್ಯಮಟ್ಟದ ಬ್ಯಾಡ್ಮಿಂಟನ್: ವಿಜೇತರಿಗೆ ಬಹುಮಾನ ವಿತರಣೆ

Update: 2016-10-11 23:44 IST

ಉಡುಪಿ, ಅ.11: ಮಣಿಪಾಲ ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ 15ನೆ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ವಿಜೇತರಾದವರಿಗೆ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬಹುಮಾನ ವಿತರಿಸಿದರು.
ಪ್ರಶಸ್ತಿ ವಿಜೇತರ ವಿವರ ಹೀಗಿದೆ

11 ವರ್ಷ ಕೆಳಗಿನ ಬಾಲಕಿಯರ ಸಿಂಗಲ್ಸ್: ಪ್ರ-ಶ್ರೇಯಾ ಎಸ್.ಎಲ್., ದ್ವಿ-ಯುಕ್ತಾ ಎಂ.(21-12, 21-9). ಬಾಲಕರ ಸಿಂಗಲ್ಸ್: ಪ್ರ-ಪ್ರಶಾಂತ್ ಬಿ. ಕೋಟ್ಯಾನ್, ದ್ವಿ-ಆರವ್ ರಾಜೇಶ್ ಮೈಂದನ್(21-12, 21-07). 13 ವರ್ಷ ಕೆಳಗಿನ ಬಾಲಕಿಯರ ಸಿಂಗಲ್ಸ್: ಪ್ರ-ಅನನ್ಯಾ ಜೋಶಿ, ದ್ವಿ- ಅಕಾಂಕ್ಷಾ ಪೈ(21-12, 21-13). ಬಾಲಕರ ಸಿಂಗಲ್ಸ್:   
ಪ್ರ-ಆಯುಷ್ ಶೆಟ್ಟಿ, ದ್ವಿ-ಪ್ರಸಿದ್ಧ್ ಬಿ. ಕೋಟ್ಯಾನ್(21-7, 21-5). 17 ವರ್ಷ ಕೆಳಗಿನ ಬಾಲಕಿಯರ ಸಿಂಗಲ್ಸ್: ಪ್ರ-ವರ್ಷಾ ಭಟ್, ದ್ವಿ- ಸ್ಪಂದನಾ ಬೇಕಲ್(21-16, 21-17).

ಬಾಲಕರ ಸಿಂಗಲ್ಸ್: ಪ್ರ-ಮೋಹಿತ್ ಡಿಸಿಲ್ವ, ದ್ವಿ-ಆದಾನ್ ಅಶ್ರಫ್(21-12, 11-21, 21-16). 17 ವರ್ಷ ಕೆಳಗಿನ ಬಾಲಕಿಯರ ಡಬಲ್ಸ್: ಪ್ರ- ವರ್ಷಾ ಭಟ್ ಮತ್ತು ಸ್ಪಂದನಾ ಬೇಕಲ್, ದ್ವಿ- ಗ್ಲಾನ್ಸಿಯಾ ಪಿಂಟೋ ಮತ್ತು ನೇಹಾ ಹರೀಶ್(20-22, 21-18, 21-19), ಬಾಲಕರ ಡಬಲ್ಸ್: ಪ್ರ- ಮೋಹಿತ್ ಡಿಸಿಲ್ವ ಮತ್ತು ಶಶಾಂಕ್ ಜಿ., ದ್ವಿ- ಹೃತಿಕ್ ಕೆ. ನಾಯ್ಕಿ ಮತ್ತು ಅನಂತ್ ಶೆಣೈ(21-11, 21-11). 40 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್: ಪ್ರ-ಸಂಜಯ್ ಪೈ ಮತ್ತು ಪರಿಮಳ್, ದ್ವಿ- ರಾಜೇಶ್ ಮತ್ತು ಗಿರೀಶ್(21-14, 21-13). ಮುಕ್ತ ಪುರುಷರ ಡಬಲ್ಸ್: ಅನಿರುದ್ಧ ಮತ್ತು ಅಮಿತ್ ಕುಮಾರ್, ದ್ವಿ- ಪ್ರಖ್ಯಾತ್ ಮತ್ತು ಜ್ಞಾನೇಶ್(18-21, 21-8, 21-11).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News