ಅ.14 ನೂತನ ಜವಳಿ ನೀತಿ ಕಾರ್ಯಾಗಾರ
Update: 2016-10-11 23:45 IST
ಉಡುಪಿ, ಅ.11: ನೂತನ ಜವಳಿ ನೀತಿ 2013-18 ಯೋಜನೆಯಡಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಜಿಲ್ಲೆಯ ಜವಳಿ ಘಟಕಗಳಿಗೆ ನೀಡುವ ಪ್ರೋತ್ಸಾಹ, ಉತ್ತೇಜನಗಳು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಉದ್ದಿಮೆದಾರರಿಗೆ/ಸಾರ್ವಜನಿಕರಿಗೆ ಮಾಹಿತಿ ನೀಡಲು ಅ.14ರಂದು ಜವಳಿ ಕಾರ್ಯಾಗಾರವನ್ನು ಕಾರ್ಕಳ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ಕ್ಕೆ ಕಾರ್ಕಳದ ತಾಪಂ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಆಸಕ್ತರು ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾಡಳಿತ ಭವನ, ರಜತಾದ್ರಿ ಮಣಿಪಾಲ ದೂ.ಸಂ.: 2574963, 9449250525ನ್ನು ಸಂಪರ್ಕಿಸಬಹುದು.