×
Ad

ಇಂದು ಪ್ರೊ.ಮೃದುಲಾ, ಪ್ರೊ.ಆದಿತ್ಯ ಮುಖರ್ಜಿ ಉಪನ್ಯಾಸ

Update: 2016-10-11 23:45 IST

ಉಡುಪಿ, ಅ.11: ಖ್ಯಾತ ಇತಿಹಾಸಜ್ಞ, ವಿದ್ವಾಂಸ ಪ್ರೊ.ಮೃದುಲಾ ಮುಖರ್ಜಿ, ಪ್ರೊ.ಆದಿತ್ಯ ಮುಖರ್ಜಿ ಹಾಗೂ ಪ್ರೊ.ಮಾರ್ಕ್ ಲಿಂಡ್ಲೆಯವರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅ.12 ಮತ್ತು 13ರಂದು ಆಯೋಜಿಸಲಾಗಿದೆ. ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ ಹಾಗೂ ಜಿಯೋ ಪಾಲಿಟಿಕ್ಸ್ ಮತ್ತು ಇಂಟರ್‌ನ್ಯಾಷನಲ್ ರಿಲೇಷನ್ಸ್ ಡಿಪಾರ್ಟ್ ವೆಂಟ್‌ನ ಜಂಟಿ ಆಶ್ರಯದಲ್ಲಿ ಮಣಿಪಾಲ ಅಂಚೆ ಕಚೇರಿ ಹಿಂಭಾಗದಲ್ಲಿರುವ ಹಳೆಯ ಟ್ಯಾಪ್ಮಿ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿರುವ ಎಲ್‌ಎಚ್1 ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

 
ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ಇತಿಹಾಸ ಅದ್ಯಯನ ಕೇಂದ್ರದ ಪ್ರೊ. ಮೃದುಲಾ ಮುಖರ್ಜಿ ‘ರಾಷ್ಟ್ರೀಯತೆ: ಭಾರತೀಯ ರಾಷ್ಟ್ರೀಯ ಚಳವಳಿಯ ವಿಭಿನ್ನ ಮಜಲುಗಳು’ ಎಂಬ ವಿಷಯದಲ್ಲಿ, ಅದೇ ವಿವಿಯ ಪ್ರೊ.ಆದಿತ್ಯ ಮುಖರ್ಜಿ ‘ಸಾಮಾಜಿಕ ಬದಲಾವಣೆಯಲ್ಲಿ ಗಾಂಧೀಜಿ ಮಾದರಿಗಳು’ ವಿಷಯದ ಕುರಿತು ಮಾತನಾಡುವರು.

ಅ.13ರಂದು ಅಮೆರಿಕದ ಪ್ರೊ.ಮಾರ್ಕ್ ಲೆಂಡ್ಲೆ ಗಾಂಧಿ ಆರ್ಥಿಕತೆ ಇತಿಹಾಸದ ವಿಶೇಷಜ್ಞರಾಗಿದ್ದು ‘ಪರಿಸರ ಆರ್ಥಿಕತೆ: ಇಂದಿನ ಅಗತ್ಯತೆಗಳು’ ವಿಷಯದ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News