‘ಹೊಂಬಣ್ಣ’ ಕನ್ನಡ ಚಲನಚಿತ್ರ ನವೆಂಬರ್‌ನಲ್ಲಿ ತೆರೆಗೆ
Update: 2016-10-11 23:46 IST
ಮಂಗಳೂರು, ಅ.11: ‘ಹೊಂಬಣ್ಣ’ ಹುಟ್ತಾನೆ ಭೂಮಿಗ್ ಯಾರು ಬೇಲಿ ಹಾಕಂಡ್ ಹುಟ್ಟಲ್ಲ ಕನ್ನಡ ಚಲನಚಿತ್ರ ನವೆಂಬರ್ ಎರಡನೆ ವಾರದಲ್ಲಿ ತೆರೆಗೆ ಕಾಣಲಿದೆ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅರಣ್ಯ ಒತ್ತುವರಿ ಎಳೆಯನ್ನು ಆಧರಿಸಿ ಮಾಡಿದ ಚಿತ್ರ ಇದಾಗಿದ್ದು, ಮಲೆನಾಡು ಮತ್ತು ದ.ಕ.. ಮಂಗಳೂರಿನ ಸಂಸ್ಕೃತಿ, ಪರಂಪರೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸುಚ್ಚಿಂದ್ರ ಪ್ರಸಾದ್, ದತ್ತಾತ್ರೇಯ, ಸುಬ್ಬು ತಲಬಿ, ಧನುಗೌಡ, ವರ್ಷಾ ಆಚಾರ್ಯ, ಪವಿತ್ರಾ, ಶರ್ಮಿತಾ ಶೆಟ್ಟಿ, ಜಗದೀಶ್ ಬೊಳ್ಳಂದೂರು, ನೀನಾಸಂ ಅಶ್ವತ್ ತಾರಾಗಣದಲ್ಲಿದ್ದಾರೆ ಎಂದರು.
ಒಟ್ಟು 7 ಹಾಡುಗಳು ಚಿತ್ರದಲ್ಲಿದ್ದು, ಅ.18ಕ್ಕೆ ಆಡಿಯೋ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ನಾಯಕ ಸುಬ್ಬು ತಲಬಿ, ಕಲಾವಿದ ಜಗದೀಶ್ ಬೆಳ್ಳಂದೂರು, ನಾಯಕಿಯರಾದ ವರ್ಷಾ ಆಚಾರ್ಯ, ಪವಿತ್ರಾ ಉಪಸ್ಥಿತರಿದ್ದರು.