×
Ad

ಉಡುಪಿ ಸರಕಾರಿ ಆಸ್ಪತ್ರೆ ಖಾಸಗಿಗೆ: ಅ.17ರಂದು ಸಿಪಿಎಂನಿಂದ ಪ್ರತಿಭಟನೆ

Update: 2016-10-12 21:30 IST

ಉಡುಪಿ, ಅ.12: ನಗರದ ಮಧ್ಯಭಾಗದಲ್ಲಿರುವ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಅನಿವಾಸಿ ಭಾರತೀಯ ಬಿ.ಆರ್.ಶೆಟ್ಟಿ ಅವರ ಬಿ.ಆರ್.ವೆಂಚರ್ಸ್‌ ಎಂಬ ಖಾಸಗಿ ಸಂಸ್ಥೆಗೆ ನೀಡುವ ರಾಜ್ಯ ಸರಕಾರದ ಪ್ರಸ್ತಾಪವನ್ನು ವಿರೋಧಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಉಡುಪಿ ತಾಲೂಕು ಸಮಿತಿ ಅ.17ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಕಳೆದ ವರ್ಷ ಈ ಸರಕಾರಿ ಆಸ್ಪತ್ರೆಯಲ್ಲಿ 1124 ಮಹಿಳೆಯರಿಗೆ ಸಿಸೇರಿಯನ್‌ಮೂಲಕ ಹೆರಿಗೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ 25ರಿಂದ 30ಸಾವಿರ ರೂ.ವೆಚ್ಚ ತಗಲುವ ಈ ಶಸ್ತ್ರಚಿಕಿತ್ಸೆ ಇಲ್ಲಿ ಧರ್ಮಾರ್ಥ ಆಗುತ್ತಿದೆ. ಹೀಗೆ ಬಡವರಿಗೆ, ವಲಸೆ ಕಾರ್ಮಿಕರಿಗೆ ಸಂಜೀವಿನಿಯಂಥಿರುವ ಈ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದೆಂದು ಅ.17ರ ಸಂಜೆ ಸರ್ವಿಸ್ ಬಸ್‌ನಿಲ್ದಾಣದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಸಂಜೆ 4:00 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಸಿಪಿಎಂನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News