ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Update: 2016-10-12 21:51 IST
ಕುಂದಾಪುರ, ಅ.12: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಕಳೆದ ರಾತ್ರಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಂಭಾಶಿಯ ಶೇಡಿಗುಳಿಯಿಂದ ವರದಿಯಾಗಿದೆ.
ಶೇಡಿಗುಳಿ ಮನೆಯ ಬಿ.ಪಿ.ವೆಂಕಟೇಶ್ (55) ಎಂಬವರೇ ಮನೆಯ ಬಳಿ ಇರುವ ಬಾವಿಗೆ ನಿನ್ನೆ ರಾತ್ರಿ 10ರಿಂದ ಇಂದು ಮುಂಜಾನೆ 6 ಗಂಟೆಯ ನಡುವಿನ ಅವಧಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.