×
Ad

ಸಾಂಸ್ಕೃತಿಕ ಪ್ರಶಸ್ತಿ ನಿರ್ಣಯ ಸಮಿತಿ ಸದಸ್ಯರಾಗಿ ಡಾ.ನಾ.ಮೊಗಸಾಲೆ ಆಯ್ಕೆ

Update: 2016-10-12 23:56 IST

ಮೂಡುಬಿದಿರೆ, ಅ.12: ಪ್ರಸಕ್ತ ಸಾಲಿನ ಸಾಂಸ್ಕೃತಿಕ ಪ್ರಶಸ್ತಿಗಳನ್ನು ನಿರ್ಣಯಿಸುವ ಸಮಿತಿಯ ಸದಸ್ಯರನ್ನಾಗಿ ಹಿರಿಯ ಸಾಹಿತಿ, ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆಯವರನ್ನು ಕರ್ನಾಟಕ ಸರಕಾರ ನೇಮಕ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಈ ಬಗ್ಗೆ ಆದೇಶವನ್ನು ನೀಡಿದ್ದು ಸಮಿತಿ ಅಧ್ಯಕ್ಷರಾಗಿ ವಿಶ್ರಾಂತ ಕುಲಪತಿ, ಸಂಸ್ಕೃತಿ ಚಿಂತಕ ಪ್ರೊ.ಬಿ.ಎ.ವಿವೇಕ ರೈಯವರನ್ನು ನೇಮಕ ಮಾಡಿದೆ.

ಪುನಾರಚಿಸಿರುವ ಸಮಿತಿಯು 2016ರ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗಳಾದ ಕನಕಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗಳನ್ನು ನಿರ್ಧರಿಸಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News