×
Ad

ಬಲೂಚ್ ಹೋರಾಟಗಾರರು ದಿಲ್ಲಿಯಲ್ಲಿ: ದೇಶಭ್ರಷ್ಟ ಸರಕಾರ ರಚನೆ ಯತ್ನ

Update: 2016-10-13 14:59 IST

ಹೊಸದಿಲ್ಲಿ, ಅಕ್ಟೋಬರ್ 13: ಭಾರತ-ಪಾಕಿಸ್ತಾನ ಸಂಬಂಧ ಕೆಟ್ಟುಹೋಗಿರುವ ವೇಳೆಯೇ, ಭಾರತ ಕೇಂದ್ರವಾಗಿಟ್ಟು, ಬಲೂಚಿಸ್ತಾನಕ್ಕೆ ದೇಶಭ್ರಷ್ಟ ಸರಕಾರವನ್ನು ರೂಪಿಸುವ ಶ್ರಮಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

 ಅನಿವಾಸಿ(ದೇಶಭ್ರಷ್ಟ) ಸರಕಾರಕ್ಕೆ ಬೆಂಬಲ ಯಾಚಿಸಿ ಬಲೂಚಿಸ್ತಾನಿ ಸ್ವಾತಂತ್ರ್ಯ ಹೋರಾಟಗಾರ ನಅ್ಲ ಕಾದ್ರಿ ಬಲೂಚ್ ದಿಲ್ಲಿಗೆ ಬಂದಿದ್ದಾರೆ. ಭಾರತೀಯ ಆಡಳಿತಗಾರರು ಮತ್ತು ಇತರ ರಾಜಕೀಯ ನಾಯಕರೊಂದಿಗೆ ಸಮಾಲೋಚಿಸಿಲಿದ್ದು,ದೇಶಭ್ರಷ್ಟ ಸರಕಾರ ರಚನೆಗಾಗಿ ತಾನು ಬೆಂಬಲ ಯಾಚಿಸುವೆ ಎಂದು ಅವರು ಹೇಳಿದ್ದಾರೆ. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ಪ್ರತ್ಯುತ್ತರವಾಗಿ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡಲು ಭಾರತ ಮುಂದೆ ಬಂದಿತ್ತು. ಚೀನಾದೊಂದಿಗೆ ಸಂಘರ್ಷ ನಡೆಸುತ್ತಿರುವ ಟಿಬೆಟ್‌ಗೆ ಬೆಂಬಲ ನೀಡುವ ಭಾರತ ಅವರಿಗೆ ದೇಶಭ್ರಷ್ಟ ಸರಕಾರ ರಚಿಸಿ ಕಾರ್ಯನಿರ್ವಹಿಸಲು ಅನುಮತಿಸಿದೆ.ಭಾರತದಿಂದ ಇಂತಹದೊಂದು ಪರಿಗಣನೆ ಸಿಗುವ ನಿರೀಕ್ಷೆ ಬಲೂಚ್ ಪ್ರತ್ಯೇಕತಾವಾದಿ ಹೋರಾಟಗಾರರಲ್ಲಿದೆ.

ಪ್ರಧಾನ ಮಂತ್ರಿ ಸ್ವಾತಂತ್ಯ ದಿನದಭಾಷಣದಲ್ಲಿ ಬಲೂಚಿಸ್ತಾನದ ವಿಷಯವನ್ನು ಪರಾಮರ್ಶಿಸಿದ್ದರು. ಆನಂತರ ಬಲೂಚ್ ಹೋರಾಟಗಾರರು ದಿಲ್ಲಿಯನ್ನು ಸಂದರ್ಶಿಸಿದ್ದರು.ಬಲೂಚ್ ಲಿಬರೇಶನ್ ಆರ್ಗನೈಝೇಶನ್(ಬಿಎಲ್‌ಒ) ನೇತೃತ್ವದಲ್ಲಿ ದಿಲ್ಲಿಯಲ್ಲಿ ಕಳೆದ ವಾರ ಸೆಮಿನಾರೊಂದು ನಡೆದಿದೆ. ಇದೇ ಪ್ರಥಮವಾಗಿ ಬಲೂಚಿಸ್ತಾನದ ವಿಷಯವನ್ನು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದೆ. ಪಾಕಿಸ್ತಾನ ಅಲ್ಲಿನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪ್ರತಿಕ್ರಿಯಿಸಲು ಭಾರತ ಜಾಗತಿಕ ರಾಷ್ಟ್ರಗಳಿಗೆ ಕರೆ ನೀಡಿತ್ತು. ಬಲೂಚ್ ಜನರಿಗಾಗಿ ಆಕಾಶವಾಣಿಯ ಸೇವೆಯನ್ನು ವ್ಯಾಪಕ ಗೊಳಿಸಲು ಕೇಂದ್ರಸರಕಾರ ನಿರ್ಧರಿಸಿದೆ. ಅದಕ್ಕಾಗಿ ಆಕಾಶವಾಣಿ ವಿಶೇಷ ಮೊಬೈಲ್ ಆ್ಯಪ್‌ನ್ನು ಮತ್ತುವೆಬ್‌ಸೈಟನ್ನು ಆರಂಭಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News