ಮೂವರು ಯುವಕರು ಸಮುದ್ರಪಾಲು
Update: 2016-10-13 16:40 IST
ಭಟ್ಕಳ, ಅ.13: ತಾಲೂಕಿನ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸ ಕೈಗೊಂಡಿದ್ದ ಮೂವರು ಯುವಕರು ಸಮುದ್ರಪಾಲಾಗಿರುವ ಘಟನೆ ಗುರುವಾರ ಇಲ್ಲಿ ನಡೆದಿದೆ.
ಈಜಲು ಸಮುದ್ರಕ್ಕೆ ಇಳಿದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕಾರ್ತಿಕ್, ಪುನೀತ್ ಹಾಗೂ ಕುಮಾರ್ ಎಂಬುವವರು ಸಮುದ್ರ ಪಾಲಾಗಿದ್ದು, ಈ ಮೂವರ ಪತ್ತೆಯಾಗಿ ಶೋಧ ಕಾರ್ಯ ನಡೆಯುತ್ತಿದೆ. ಸಮುದ್ರ ಪಾಲಾಗಿರುವ ಮೂವರು ಯುವಕರು 9 ಜನರ ತಂಡ ದೊಂದಿಗೆ ಮುರುಡೇಶ್ವರಕ್ಕೆ ಪ್ರವಾಸ ಕೈಗೊಂಡಿದ್ದರು.