ಮಹಿಳೆಯ ಕರಿಮಣಿ ಸರ ಕಸಿದು ಪರಾರಿ

Update: 2016-10-13 12:05 GMT

ಪುತ್ತೂರು, ಅ.13: ಗುಡ್ಡದಲ್ಲಿ ಹುಲ್ಲು ಕತ್ತರಿಸುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಅಪರಿಚಿತನೊಬ್ಬ ಎಗರಿಸಿಕೊಂಡು ಪರಾರಿಯಾದ ಘಟನೆ ಪುತ್ತೂರು ನಗರದ ಹೊರವಲಯದಲ್ಲಿರುವ ಕಬಕ ಗ್ರಾಮದ ಪೋಳ್ಯ ಸಮೀಪ ಬುಧವಾರ ನಡೆದಿದೆ.

ಕಬಕ ಗ್ರಾಮದ ಪೋಳ್ಯ ನಿವಾಸಿ ಮಾಲತಿ ಎಂಬವರು ಕರಿಮಣಿ ಸರ ಕಳಕೊಂಡ ಮಹಿಳೆ. ಮಾಲತಿ ಅವರು ದನಗಳಿಗೆ ಹುಲ್ಲು ತರಲೆಂದು ತಮ್ಮ ಮನೆಯ ಸಮೀಪದ ಗುಡ್ಡಕ್ಕೆ ತೆರಳಿದ್ದರು. ಅವರು ಗುಡ್ಡದಲ್ಲಿ ಹುಲ್ಲು ಕತ್ತರಿಸುತ್ತಿದ್ದ ವೇಳೆ ಅರಿವಿಗೆ ಬಾರದಂತೆ ಹಿಂದಿನಿಂದ ಬಂದ ಚೋರನೊಬ್ಬ ಮಾಲತಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರಕ್ಕೆ ಕೈಹಾಕಿ ಕಸಿಯಲು ಯತ್ನಿಸಿದ್ದು, ಈ ವೇಳೆ ಮಾಲತಿ ಅವರು ಕರಿಮಣಿ ಸರವನ್ನು ಹಿಡಿದುಕೊಂಡ ಪರಿಣಾಮವಾಗಿ ಒಂದು ಭಾಗ ಮಾತ್ರ ಅವರ ಕೈಯಲ್ಲಿ ಉಳಿದುಕೊಂಡಿದೆ. ಕಳ್ಳ ತನ್ನ ಕೈಗೆ ಸಿಕ್ಕಿದ ಕರಿಮಣಿ ಸರದ ಒಂದು ಭಾಗವನ್ನು ಕಸಿದು ಅಲ್ಲಿಂದ ಪರಾರಿಯಾಗಿದ್ದಾನೆ. ಕಳವಾದ ಕರಿಮಣಿ ಸರದ ವೌಲ್ಯ 20 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಘಟನೆಯ ಕುರಿತು ಮಾಲತಿ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News