ಸುಳ್ಯ: ಬಿಜೆಪಿ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಮೋರ್ಚಾಗಳ ಪದಗ್ರಹಣ

Update: 2016-10-13 12:22 GMT

ಸುಳ್ಯ, ಅ.13: ಸುಳ್ಯ ಬಿಜೆಪಿ ಮಂಡಲ ಸಮಿತಿಗಳ ಎಸ್ಸಿ-ಎಸ್ಟಿ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾಗಳ ಪದಗ್ರಹಣ ಸಮಾರಂಭವು ಸುಳ್ಯ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಎಸ್ಸಿ ಮೋರ್ಚಾ ಪದಗ್ರಹಣವನ್ನು ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ ಅಮ್ಕೂರ್ ನೆರವೇರಿಸಿದರು. ಎಸ್ಟಿ ಮೋರ್ಚಾ ಪದಗ್ರಹಣವನ್ನು ಮೋರ್ಚಾ ಜಿಲ್ಲಾಧ್ಯಕ್ಷ ರುಕ್ಷ್ಮಯ ನಾಯ್ಕಿ ನೆರವೇರಿಸಿದರೆ, ಅಲ್ಪಸಂಖ್ಯಾತ ಮೋರ್ಚಾದ ಪದಗ್ರಹಣವನ್ನು ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಾಬು ಜೇಕಬ್ ನೆರವೇರಿಸಿ, ಪಕ್ಷ ಸಂಘಟನೆಯ ಕುರಿತು ಮಾತನಾಡಿದರು.

ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮೂರು ಮೋರ್ಚಾಗಳ ಸಮಿತಿಯ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪಿ.ಜಿ.ಎಸ್.ಎನ್. ಪ್ರಸಾದ್, ಜಿಲ್ಲಾ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಎಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸೀತಾನಂದ ಬೇರ್ಪಡ್ಕ, ದಾಮೋದರ ಮಂಚಿ, ಎಪಿಎಂಸಿ ನಿರ್ದೇಶಕ ಶಂಕರ ಪೆರಾಜೆ, ಮಂಡಲ ಸಮಿತಿ ಮಾಜಿ ಕಾರ್ಯದರ್ಶಿ ಮುಳಿಯ ಕೇಶವ ಭಟ್ ವೇದಿಕೆಯಲ್ಲಿದ್ದರು. ಮಂಡಲ ಉಪಾಧ್ಯಕ್ಷ ವಿನಯ ಮುಳುಗಾಡು ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ ವಂದಿಸಿದರು.

ಎಸ್ಸಿ ಮೋರ್ಚಾದ ಅಧ್ಯಕ್ಷರಾಗಿ ಬಾಳಪ್ಪ ಕಳಂಜ, ಉಪಾಧ್ಯಕ್ಷರಾಗಿ ಕೊರಗಪ್ಪ ವಿ., ಶಿವಪ್ಪ ಕೋಡ್ತಿಲು, ಪ್ರಧಾನ ಕಾರ್ಯದರ್ಶಿ ಶೀನಪ್ಪ ಬಯಂಬು, ಕಾರ್ಯದರ್ಶಿಗಳಾಗಿ ಮಹಾಬಲ ಪಡುಬೆಟ್ಟು, ಮಲ್ಲೇಶ ಕುಡೆಕಲ್ಲು, ರಾಮಚಂದ್ರ ಚೆನ್ನಾವರ, ಕಾರ್ಯದರ್ಶಿ ಕೇಶವ ಕಕ್ಕೆಬೆಟ್ಟು ಮನೆ, ಕೋಶಾಧಿಕಾರಿ ಕೃಷ್ಣ ಸುಳ್ಳಿ, ಸದಸ್ಯರುಗಳಾಗಿ ರಾಮ ಅಟ್ಲೂರು, ಸುಂದರ ಮೊರಂಗಲ್ಲು, ಸುಂದರ ನೆಹರೂನಗರ, ಗಂಗಯ್ಯ ಮೈತಡ್ಕ, ಅಣ್ಣಿ ವಾಳಗದಕೇರಿ, ಹುಕ್ರಪ್ಪ ರಾಜಾರಾಂಪುರ, ಸಂಜೀವ ಕಲಾಯಿ ಮನೆ, ರಮೇಶ ಪದ್ಮಡ್ಕ, ಶೀನಪ್ಪ ಬಾಳಿಲ, ರಮೇಶ ಅಡ್ಕಾರ್, ವಿಶ್ವನಾಥ ಕಟ್ಟ ಮನೆ, ಜಯಪ್ರಕಾಶ ಪರಿಯಂಬಿ ಮನೆ, ಧರ್ಮಪಾಲ ಅಡ್ಡನಪಾರೆ ಆಯ್ಕೆಯಾಗಿದ್ದಾರೆ.
 
 ಅಧ್ಯಕ್ಷರಾಗಿ ಅಶ್ರಫ್ ಕಾಸಿಲೆ, ಉಪಾಧ್ಯಕ್ಷರಾಗಿ ಸುನಿತಾ ಎಂ.ಡಿಸೋಜ, ಎಂ.ಕೆ.ಇಬ್ರಾಹೀಂ, ಪ್ರಧಾನ ಕಾರ್ಯದರ್ಶಿ ಫಯಾಝ್ ಕಡಬ, ಕಾರ್ಯದರ್ಶಿ ಅಂಜೇರಿ ಜೋಸ್, ಅಬ್ದುರ್ರಹ್ಮಾನ್ ಪಾಣ್ಯ, ಮುಹಮ್ಮದ್ ಪೈಚಾರ್, ಅಬ್ದುಲ್ ಖಾದರ್, ಕೋಶಾಧಿಕಾರಿ ಬಿ.ಕೆ.ಮೊಹಿದ್ದೀನ್ ಕೊಪ್ಪಳ, ಸದಸ್ಯರಾಗಿ ಆದಂ ಕುಂಡೋಳಿ, ಪಿ.ಪಿ.ಥೋಮಸ್ ಪಾಲ್ತಾಜೆ, ಅಬೂಬಕರ್ ಮರ್ದಾಳ, ಅಬ್ದುರ್ರಹ್ಮಾನ್ ಅಡ್ಕಾಡಿ, ಬೇಬಿ ಮ್ಯಾಥ್ಯೂ, ಇಸ್ಮಾಯೀಲ್ ಕಾನಾವು, ಮಹಮ್ಮದ್ ಪುಂಚತ್ತಾರು, ಆರಿಫ್ ಬೆಳ್ಳಾರೆ, ಅಬ್ದುರ್ರಝಾಕ್ ಮುಚ್ಚಿಲ, ಇಲ್ಯಾಸ್ ಅಜ್ಜಾವರ, ನವೀನ ಕ್ರಾಸ್ತ ಮಾಣಿಬೆಟ್ಟು, ಹಾಜಿರಾರನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಶಿವಾನಂದ ರಂಗತ್ತಮಲೆ, ಉಪಾಧ್ಯಕ್ಷರುಗಳಾಗಿ ಹರಿಣಾಕ್ಷಿ ಸುಬ್ರಹ್ಮಣ್ಯ, ಜಿ.ಬುದ್ಧ ನಾಯ್ಕ ಹಳೆಗೇಟು, ಪ್ರ.ಕಾರ್ಯದರ್ಶಿ ಶರತ್ ಕುಮಾರ ಪಂಬೆತ್ತಾಡಿ, ಕಾರ್ಯದರ್ಶಿಗಳಾಗಿ ರಾಧಾಕೃಷ್ಣ ಕೆಮ್ಮಾರು, ಪದ್ಮಾವತಿ ಹರಿಹರ, ರೇವತಿ ದೊಡ್ಡೇರಿ, ಪದ್ಮಯ್ಯ ನಾಯ್ಕ ಚೆನ್ನಡ್ಕ, ಕೋಶಾಧಿಕಾರಿ ದಿನೇಶ ಗರಡಿಮನೆ, ಸದಸ್ಯರುಗಳಾಗಿ ಜಗನ್ನಾಥ ಕಲ್ಲಡ್ಕ, ಕುಮಾರಿ ದಿವ್ಯ ಶೆಟ್ಟಿಗದ್ದೆ, ಜೋಕಿ ಕೊರಗ ನೀರಬಿದಿರೆ, ವಿಠಲ ನಾಯ್ಕ, ಮುಳ್ಯ, ಸುಲೋಚನಾ ಕುರುಂಜಿಗುಡ್ಡೆ, ದಯಾನಂದ ಎಂ, ಗುಲಾಬಿ ಕೋನಡ್ಕಪದವು, ಕೂಸಪ್ಪ ನಾಯ್ಕ ಕೊಡಿಯಾಲ, ವಿತ ಕರಿಕ್ಕಳ, ಶಿವರಾಮ ನಾಯ್ಕ ಕಾಪುಮಲೆ, ಪದ್ಮಾವತಿ ಕುಡೆಂಬಿ, ಸತೀಶ ಗುಂಡ್ಯತೋಟ, ಸುಧಾ ಬೊಟ್ಟಡ್ಕರವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News