ಬಿಜೆಪಿ ಕಾರ್ಯಕರ್ತನ ಹತ್ಯೆ: ಕೇರಳ ಸರಕಾರದಿಂದ ವರದಿ ಕೇಳಿದ ಕೇಂದ್ರ

Update: 2016-10-13 14:04 GMT

ಹೊಸದಿಲ್ಲಿ, ಅ.13: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿರುವ 25ರ ಹರೆಯದ ಬಿಜೆಪಿ ಕಾರ್ಯಕರ್ತನೊಬ್ಬನ ಬರ್ಬರ ಹತ್ಯೆಗೆ ಸಂಬಂಧಿಸಿ ವರದಿಯೊಂದನ್ನು ಕೇಂದ್ರ ಸರಕಾರವು ಕೇರಳ ಸರಕಾರದಿಂದ ಕೇಳಿದೆ.

ಘಟನೆಯ ವಿವರ ಹಾಗೂ ಅಪರಾಧಕ್ಕೆ ಹೊಣೆಗಾರರಾದವರ ಬಂಧನ ಹಾಗೂ ಶಿಕ್ಷೆ ವಿಧಿಸುವುದಕ್ಕೆ ಕೈಗೊಂಡಿರುವ ಕ್ರಮದ ಕುರಿತು ವಿವರ ಒದಗಿಸುವಂತೆ ಕೇರಳ ಸರಕಾರಕ್ಕೆ ಕೇಂದ್ರ ಗೃಹ ಸಚಿವಾಲಯವು ಪತ್ರವೊಂದರಲ್ಲಿ ಸೂಚಿಸಿದೆ.

ರಾಜ್ಯದಲ್ಲಿ ರಾಜಕೀಯ ಕಾರ್ಯಕರ್ತರ ಸುರಕ್ಷೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತಾಗಿಯೂ ಮಾಹಿತಿಯೊದಗಿಸುವಂತೆಯೂ ಅದು ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ತವರು ಪಟ್ಟಣದಲ್ಲಿ ನಿನ್ನೆ ರಮಿತ್ ಎಂಬ ಬಿಜೆಪಿ ಕಾರ್ಯಕರ್ತನನ್ನು ಹಾಡಹಗಲೇ ಥಳಿಸಿ ಕೊಲ್ಲಲಾಗಿದೆ. ಅದಕ್ಕೆ 2 ದಿನ ಮೊದಲು ಸಿಪಿಎಂ ಕಾರ್ಯಕರ್ತ ಹಾಗೂ ಸೇಂದಿ ಅಂಗಡಿಯ ಕೆಲಸಗಾರ ಮೋಹನನ್ ಎಂಬಾತನ ಹತ್ಯೆಯಾಗಿತ್ತು.

ರಮಿತ್‌ನ ಹತ್ಯೆಯನ್ನು ಪ್ರತಿಭಟಿಸಿ ಇಂದು ಕೇರಳ ಬಂದ್‌ಗೆ ಬಿಜೆಪಿ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News