ಕಾನ್ಪುರದ ಬೌದ್ಧ ಸಮಾರಂಭಕ್ಕೆ ಅಮಿತ್ ಶಾ

Update: 2016-10-13 15:41 GMT

ಕಾನ್ಪುರ, ಅ.13: ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಾಳೆ ಇಲ್ಲಿ ನಡೆಯಲಿರುವ ಬೌದ್ಧರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಅಪಾರ ಸಂಖ್ಯೆಯ ದಲಿತರು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನು ಚುನಾವಣಾ ಹೊಸ್ತಿಲಲ್ಲಿರುವ ಉತ್ತರಪ್ರದೇಶದಲ್ಲಿ ದಲಿತ ಸಮುದಾಯವನ್ನು ತಲುಪುವ ಬಿಜೆಪಿಯ ಇನ್ನೊಂದು ಪ್ರಯತ್ನವೆಂದು ವ್ಯಾಖ್ಯಾನಿಸಲಾಗಿದೆ.

ಪಾಲಿಕಾ ಕ್ರೀಡಾಂಗಣದಲ್ಲಿ 6 ತಿಂಗಳಿನಿಂದ ನಡೆಯುತ್ತಿರುವ ಧಮ್ಮ ಚೇತನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಶಾ ಭಾಗವಹಿಸಲಿದ್ದು, 110 ಮಂದಿ ಬೌದ್ಧ ಬಿಕ್ಕುಗಳನ್ನು ಸನ್ಮಾನಿಸಲಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಯಾತ್ರೆ ನಾಳೆ ಕಾನ್ಪುರವನ್ನು ತಲುಪಲಿವೆಯೆಂದು ಕಾನ್ಪುರ ಬಿಜೆಪಿ ಅಧ್ಯಕ್ಷ ಸುರೇಂದ್ರ ಮೈಥಾನಿ ತಿಳಿಸಿದ್ದಾರೆ.

ಸಮಾರಂಭದಲ್ಲಿ 30 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ದಲಿತ ಸಮುದಾಯವನ್ನು ತಲುಪಿ, ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಅರಿಯುವುದು ಇದರ ಗುರಿಯಾಗಿದೆ. ಯಾತ್ರೆಯ ರಾಜ್ಯದ ಮುಂದಿನ ಚುನಾವಣೆಗೆ ಸಂಬಂಧಿಸಿದದಲ್ಲ. ಶಾ, ಬೆಳಗ್ಗೆ 11 ಗಂಟೆಗೆ ಪಾಲಿಕಾ ಕ್ರೀಡಾಂಗಣಕ್ಕೆ ಆಗಮಿಸಿ, ಸಭೆಯನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆಯೆಂದು ಅವರು ಹೇಳಿದ್ದಾರೆ.

ಕಾರ್ಯಕ್ರಮಕ್ಕಾಗಿ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ರಾಜ್ಯದ ಹಲವು ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News