×
Ad

ಮಕ್ಕಳ ಹಕ್ಕುಗಳು ಸಂಪೂರ್ಣ ಅಬಾಧಿತ: ಹೈಕೋರ್ಟ್

Update: 2016-10-13 23:47 IST

ಹೊಸದಿಲ್ಲಿ, ಅ.13: ಮಕ್ಕಳು ಹೀನ ಅಪರಾಧ ವೊಂದರಲ್ಲಿ ಸಿಲುಕಿದ್ದರೂ ಅವರ ಹಕ್ಕುಗಳು ಸಂಪೂರ್ಣವಾಗಿ ಅಬಾಧಿತವಾಗಿರುತ್ತವೆ ಎಂದಿರುವ ದಿಲ್ಲಿ ಹೈಕೋರ್ಟ್, ಕೊಲೆ ಪ್ರಕರಣವೊಂದರಲ್ಲಿ ಅಪ್ರಾಪ್ತ ವಯಸ್ಕನೊಬ್ಬನಿಗೆ 9 ವರ್ಷಕ್ಕೂ ಹೆಚ್ಚಿನ ಶಿಕ್ಷೆ ವಿಧಿಸಿದ ಸತ್ರ ನ್ಯಾಯಾಲಯವೊಂದರ ತೀರ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.

ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದ ಕಾನೂನಿನ ಕುರಿತು ವಿಚಾರಣಾ ನ್ಯಾಯಾಲಯಗಳ ನ್ಯಾಯಾ ಧೀಶರಿಗೆ ತರಬೇತಿ ನೀಡುವುದು ಅಗತ್ಯವಿದೆ ಎಂದು ಸಲಹೆ ನೀಡಿರುವ ಹೈಕೋರ್ಟ್, ಬಾಲ ನ್ಯಾಯ ಕಾಯ್ದೆಯನ್ವಯ ಅಪ್ರಾಪ್ತ ವಯಸ್ಕನ ಅಮೂಲ್ಯ ಹಕ್ಕುಗಳನ್ನು ಸಂಪೂರ್ಣವಾಗಿ ಮರೆತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆಯೆಂದು ಹೇಳಿದೆ.

ಅಪ್ರಾಪ್ತ ವಯಸ್ಕ ಬಾಲಕನನ್ನು ದೋಷಮುಕ್ತಿ ಗೊಳಿಸಿದ ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್ ಹಾಗೂ ಪಿ.ಎಸ್. ತೇಜಿಯವರನ್ನೊಳಗೊಂಡ ಪೀಠ ವೊಂದು, ಬಾಲ ನ್ಯಾಯದ ಕುರಿತು ಪುನರ್ಮನನ ಕೋರ್ಸ್ ಒಂದನ್ನು ವಿನ್ಯಾಸಿಸುವಂತೆ ಹಾಗೂ ಅದಕ್ಕಾಗಿ ಪಠ್ಯವನ್ನು ರಚಿಸುವಂತೆ ತಾನು ನೀಡಿರುವ ಆದೇಶದ ಪ್ರತಿಯೊಂದನ್ನು ದಿಲ್ಲಿ ನ್ಯಾಯಾಂಗ ಅಕಾಡಮಿಯ ನಿರ್ದೇಶಕರಿಗೆ ಕಳುಹಿಸುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News