×
Ad

ಚೀನೀ ಉತ್ಪನ್ನ ನಿಷೇಧಿಸಬೇಕೆಂಬ ಕರೆ ಭಾರತದಲ್ಲಿ ವಿಫಲ: ಚೀನಾದ ಸುದ್ದಿ ಸಂಸ್ಥೆ

Update: 2016-10-14 16:34 IST

ಬೀಜಿಂಗ್, ಅ.14: ಜೈಶ್ ಇ ಮುಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ಗೆ ನಿಷೇಧವನ್ನು ಚೀನಾ ವಿರೋಧಿಸಿದ್ದಕ್ಕೆ ಪ್ರತಿಯಾಗಿ ಭಾರತದಲ್ಲಿ ಚೀನೀ ಉತ್ಪನ್ನಗಳನ್ನು ನಿಷೇಧಿಸಬೇಕೆಂದು ನೀಡಿರುವ ಕರೆ ವಿಫಲವಾಗಿದ್ದು ಹಬ್ಬದ ಸಮಯದಲ್ಲಿ ಚೀನೀ ಉತ್ಪನ್ನಗಳ ಮಾರಾಟ ಭಾರತದಲ್ಲಿ ದಾಖಲೆ ಮಟ್ಟಕ್ಕೇರಿದೆಯೆಂದು ಚೀನಾದ ಅಧಿಕೃತ ಸುದ್ದಿ ಮಾಧ್ಯಮ ತಿಳಿಸಿದೆ.

ಭಾರತದಲ್ಲಿ ಬಹು ಮುಖ್ಯ ಹಬ್ಬವಾದ ದೀಪಾವಳಿ ಈ ತಿಂಗಳಾಂತ್ಯಕ್ಕೆ ಆಚರಿಸಲಾಗುವುದರಿಂದ ಚೀನೀ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಕರೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರತೀಯ ರಾಜಕಾರಣಿಗಳು ವಾಸ್ತವವನ್ನು ಉತ್ಪ್ರೇಕ್ಷಿಸುತ್ತಿದ್ದಾರೆ, ಎಂದು ಚೀನಾದ ಸರಕಾರಿ ಸುದ್ದಿ ಸಂಸ್ಥೆಗ್ಲೋಬಲ್ ಟೈಮ್ಸ್ ಹೇಳಿದೆ.

ಚೀನೀ ಉತ್ಪನ್ನಗಳು ಭಾರತದಾದ್ಯಂತ ಜನಪ್ರಿಯವಾಗಿದೆ. ಅದನ್ನು ನಿಷೇಧಿಸಬೇಕೆಂಬ ಕರೆ ಯಶಸ್ವಿಯಾಗಿಲ್ಲ ಎಂದು ಅದು ಹೇಳಿಕೊಂಡಿದೆ. ಚೀನಾದ ಮೊಬೈಲ್ ಫೋನ್ ಕಂಪೆನಿ ಕ್ಸಿಯೋಮಿ ಫ್ಲಿಪ್ ಕಾರ್ಟ್, ಅಮೆಝಾನ್ ಇಂಡಿಯಾ, ಸ್ನ್ಯಾಪ್ ಡೀಲ್ ಮತ್ತು ಟಾಟಾ ಕ್ಲಿಕ್ ನಲ್ಲಿಕೇವಲ ಮೂರೇ ದಿನದಲ್ಲಿ ಒಟ್ಟು ಅರ್ಧ ಮಿಲಿಯನ್ ಫೋನುಗಳ ಮಾರಾಟವಾಗಿದೆ ಎಂದೂ ಪತ್ರಿಕೆಯಲ್ಲಿನ ಲೇಖನವೊಂದರಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News