ಅಭಿವೃದ್ಧಿಶೀಲ ದೇಶಗಳ 6ರಲ್ಲಿ 5 ಮಕ್ಕಳಿಗೆ ಪೌಷ್ಟಿಕ ಅಹಾರವಿಲ್ಲ: ಯುನಿಸೆಫ್

Update: 2016-10-14 14:22 GMT

ರೋಮ್, ಅ. 14: ಅಭಿವೃದ್ಧಿಶೀಲ ದೇಶಗಳಲ್ಲಿರುವ ಎರಡು ವರ್ಷಕ್ಕಿಂತಲೂ ಕಿರಿಯ ಪ್ರತಿ ಆರು ಮಕ್ಕಳ ಪೈಕಿ ಐದು ಮಕ್ಕಳಿಗೆ ಸರಿಯಾದ ರೀತಿಯ ಆಹಾರ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ ಹಾಗೂ ಇದು ಆ ಮಕ್ಕಳ ಮೇಲೆ ಸರಿಪಡಿಸಲಾಗದ ಮಾನಸಿಕ ಮತ್ತು ದೈಹಿಕ ಹಾನಿಯನ್ನು ಉಂಟು ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಶುಕ್ರವಾರ ಹೇಳಿದೆ.

ಆರು ಮತ್ತು 23 ತಿಂಗಳುಗಳ ನಡುವಿನ ಪ್ರಾಯದ ಮಕ್ಕಳ ಅರ್ಧದಷ್ಟು ಮಂದಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಸಿಗುತ್ತಿಲ್ಲ ಎಂದು ಅದು ತಿಳಿಸಿದೆ.
ಈ ವಯೋಗುಂಪಿನ ಮಕ್ಕಳ ಬೆಳೆಯುತ್ತಿರುವ ಮೆದುಳುಗಳು, ಮೂಳೆಗಳು ಮತ್ತು ಶರೀರಗಳಿಗೆ ಘನ ಆಹಾರಗಳು ಮತ್ತು ವಿವಿಧ ರೀತಿಯ ಪೋಷಕಾಂಶಗಳ ತುರ್ತು ಅಗತ್ಯವಿರುವಾಗ, ಅವುಗಳು ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಅದು ತಿಳಿಸಿದೆ.

ಅಭಿವೃದ್ಧಿಶೀಲ ದೇಶಗಳಲ್ಲಿರುವ ಸ್ಥಿತಿವಂತ ಕುಟುಂಬಗಳ ಹೆಚ್ಚಿನ ಶಿಶುಗಳು ಮತ್ತು ಎಳೆಯ ಮಕ್ಕಳೂ ಉತ್ತಮ ಆಹಾರದಿಂದ ವಂಚಿತರಾಗಿದ್ದಾರೆ ಎಂದು ಅಕ್ಟೋಬರ್ 16ರಂದು ಆಚರಿಸಲ್ಪಡುವ ವಿಶ್ವ ಆಹಾರ ದಿನದ ಮುಂಚಿತವಾಗಿ ಪ್ರಕಟಿಸಿದ ವರದಿಯಲ್ಲಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News