ಫಳ್ನಿರ್: ಕಾರ್ಪೊರೇಶನ್ ಬ್ಯಾಂಕ್‌ನ ನಗರದ 58ನೆ ಶಾಖೆ, 100ನೆ ಎಟಿಎಂ ಉದ್ಘಾಟನೆ

Update: 2016-10-14 16:06 GMT

ಮಂಗಳೂರು,ಅ.14: ಕಾರ್ಪೊರೇಶನ್ ಬ್ಯಾಂಕ್‌ನ ನಗರದ 58ನೆ ಶಾಖೆಯನ್ನು ಹಾಗೂ 100ನೆ ಎಟಿಎಂನ್ನು ಫಳ್ನೀರ್‌ನಲ್ಲಿಂದು ಬ್ಯಾಂಕಿನ ಆಡಳಿ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯ್ ಕುಮಾರ್ ಗರ್ಗ್ ಉದ್ಘಾಟಿಸಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಜಯ್‌ಕುಮಾರ್ ಗರ್ಗ್, ದೇಶದಲ್ಲಿ ಕಂಪ್ಯೂಟರೀಕೃತ ಬ್ಯಾಂಕ್, ಕೋರ್ ಬ್ಯಾಂಕ್ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಬ್ಯಾಂಕ್‌ಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಪ್ರಸಕ್ತ ತನ್ನ ಗುಣ ಮಟ್ಟದ ಬ್ಯಾಂಕಿಂಗ್ ಸೇವೆಯಿಂದ ಇತರ ಬ್ಯಾಂಕ್‌ಗಳಿಂದ ಭಿನ್ನವಾಗಿದೆ. ಕಾರ್ಪ್ ಬ್ಯಾಂಕ್ ಗ್ರಾಹಕರ ನಿರೀಕ್ಷೆಗೆ ಸಂಬಂಧಿಸಿದಂತೆ ಗೃಹ, ವಾಹನ ,ಇತರ ವೃತ್ತಿಪರರಿಗೆ ಸಾಲ ಜೊತಗೆ ವಿಮಾ ಸೌಲಭ್ಯದಂತಹ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತಾ ಬಂದಿರುವ ಕಾರಣ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ವಿಮಾ ಸೌಲಭ್ಯ ಗ್ರಾಹಕರಿಗೆ ಯಾವರೀತಿಯಲ್ಲಿ ಉಪಯೋಗವಾಗುತ್ತದೆ ಎನ್ನುವ ಬಗ್ಗೆ ವಿವರಿಸುತ್ತಾ ಕೊಯಮತ್ತೂರು ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದ ಮಹಿಳೆ ಕೇವಲ 250 ರೂ. ಹೊಂದ್ದಿರು ಅದನ್ನು ಹಿಂದಕ್ಕೆ ಪಡೆದು ಬ್ಯಾಂಕ್ ಖಾತೆ ಮುಚ್ಚಲು ಹೊರಟ ಸಂದರ್ಭದಲ್ಲಿ ಅಲ್ಲಿನ ಬ್ಯಾಂಕಿನ ಅಧಿಕಾರಿಗಳು ಆಕೆಗೆ ಬ್ಯಾಂಕ್‌ನ ಮೂಲಕ ವಿಮಾ ಯೋಜನೆಯ ಸೌಲಭ್ಯದ ಬಗ್ಗೆ ತಿಳಿಸಿ ಬಳಿಕ ಆ ಮಹಿಳೆ 6.30ಲಕ್ಷ ರೂ. ವಿಮಾ ಪರಿಹಾರ ದೊರೆತ ಬಗ್ಗೆ ಜಯ್‌ಕುಮಾರ್ ಗರ್ಗ್ ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಿಲಾಗ್ರಿಸ್ ಚರ್ಚ್‌ನ ಪ್ರಧಾನ ಧರ್ಮ ಗುರುಗಳಾದ ವಂ.ವೆಲೇರಿಯನ್ ಡಿಸೋಜ ಶುಭ ಹಾರೈಸಿದರು.

ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಮುರಳಿ ಭಗತ್, ಶಾಖಾ ಮುಖ್ಯಸ್ಥರಾದ ಜೋನ್ ಗ್ರೇಸಿ ಲೋಬೊ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕಿನ ವಲಯ ಮುಖ್ಯಎ.ಕೆ.ವಿನೋದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News