ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Update: 2016-10-14 23:31 IST
ಮಂಗಳೂರು, ಅ. 14: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.
ಆರೋಪಿಯನ್ನು ಬಜಾಲ್ ಪಡ್ಪು ನಿವಾಸಿ ಮುಹಮ್ಮದ್ ಆರಿಫ್ (33) ಎಂದು ಗುರುತಿಸಲಾಗಿದೆ.
ಈತ 2006ರಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ನಗರದ ಜೆಎಂಎಫ್‌ಸಿ 2ನೆ ನ್ಯಾಯಾಯಲದಿಂದ ಜಾಮೀನು ಪಡೆದುಕೊಂಡಿದ್ದ. ಬಳಿಕ ನ್ಯಾಯಾಲಯದಿಂದ ಸಮನ್ಸ್ ವಾರಂಟ್ ಜಾರಿಗೊಂಡಿದ್ದರೂ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೊನೆಗೂ ಬರ್ಕೆ ಠಾಣಾ ಪೊಲೀಸರು ಆತನನ್ನು ಇಂದು ಕೊಣಾಜೆಯಿಂದ ಬಂಧಿಸಿದ್ದಾರೆ.