ಇಂದಿನ ಕಾರ್ಯಕ್ರಮಗಳು
ವಾಲ್ಮೀಕಿ ಜಯಂತಿ: ಜಿಲ್ಲಾಡಳಿತ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆಯ ಸಹಯೋಗದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ. ಸಮಯ: ಬೆಳಗ್ಗೆ 10u3221?್ಕೆ. ಸ್ಥಳ: ಜಿಲ್ಲಾ ಅಂಬೇಡ್ಕರ್ ಭವನ, ಆದಿಉಡುಪಿ ಉಡುಪಿ.
ತುಳು ಮಿನದನ ಒಡಿಪು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳುಕೂಟ ಉಡುಪಿ, ಎಂಜಿಎಂ ಕಾಲೇಜಿನ ತುಳು ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ತುಳು ಮಿನದನ ಒಡಿಪು-2016’. ಸಮಯ: ಬೆಳಗ್ಗೆ 9:30u3248?ಿಂದ ಸಂಜೆ 7u3248?ವರೆಗೆ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ.
ವಿಶೇಷ ಉಪನ್ಯಾಸ: ರಥಬೀದಿ ಗೆಳೆಯರು ಉಡುಪಿ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಅಮೆರಿಕದ ವಿದ್ವಾಂಸ ಪ್ರೊ.ಮಾರ್ಕ್ ಲಿಂಡ್ಲೆ ಇವರಿಂದ ವಿಶೇಷ ಉಪನ್ಯಾಸ. ವಿಷಯ ‘ಜೆ.ಸಿ.ಕುಮಾರಪ್ಪ ಮತ್ತು ಗಾಂಧಿ ಅರ್ಥಶಾಸ್ತ್ರ’. ಸಮಯ: ಸಂಜೆ 4:30u3248?ಿಂದ. ಸ್ಥಳ: ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಉಡುಪಿ.
ಸ್ವಚ್ಛನಗರ ಮ್ಯಾರಥಾನ್: ಜೇಸಿ ಸಪ್ತಾಹದ ಅಂಗವಾಗಿ ಜೆಸಿಐ ಮಣಿಪಾಲ ಹಿಲ್‌ಸಿಟಿ, ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿ, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ‘ಸ್ವಚ್ಛ ನಗರ, ಸುಂದರ ನಗರ ಮ್ಯಾರಥಾನ್’ ಸ್ಪರ್ಧೆ. ಸಮಯ: ಬೆಳಗ್ಗೆ 7u3248?ಿಂದ. ಸ್ಥಳ: ಜೋಡುಕಟ್ಟೆಯಿಂದ ಇಂದ್ರಾಳಿ ಶ್ರೀಕೃಷ್ಣ ಪೆಟ್ರೋಲಿಯಂವರೆಗೆ ಉಡುಪಿ. ಅಪ್ಟಿಕಾನ್-2016: ಮಣಿಪಾಲ ವಿವಿಯ ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಯನ್ಸ್‌ನ ವತಿಯಿಂದ ಅಸೋಸಿಯೇಷನ್ ಆಫ್ ಫಾರ್ಮಸಿ ಟೀಚರ್ಸ್ ಆಫ್ ಇಂಡಿಯಾದ ಸ್ವರ್ಣಮಹೋತ್ಸವದ ಆಚರಣೆ ಹಾಗೂ 21u3240?ೆ ಅಪ್ಟಿ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ಹಿರಿಯ ಫಾರ್ಮಸಿ ಅಧ್ಯಾಪಕರಿಗೆ ಸನ್ಮಾನ. ಸಮಯ: ಸಂಜೆ 6:30u3221?್ಕೆ. ಸ್ಥಳ: ಡಾ.ಟಿಎಂಎ ಪೈ ಸಭಾಂಗಣ, ಕೆಎಂಸಿ ಮಣಿಪಾಲ. ದಕ್ಷಿಣ ಭಾರತ ಯೋಗಾ ಕ್ರೀಡಾ ಸ್ಪರ್ಧೆ: ಯೋಗಾ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಮೊದಲ ದಕ್ಷಿಣ ಭಾರತ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ಸ್ಪರ್ಧೆಗಳು. ಸಮಯ: ಬೆಳಗ್ಗೆ 9u3248?ಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ. ಯಕ್ಷಗಾನ ಪ್ರದರ್ಶನ: ಯಕ್ಷಗಾನ ಕೇಂದ್ರದ ವತಿಯಿಂದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಯಕ್ಷಗಾನ ವಿಶೇಷ ತರಬೇತಿ ಯೋಜನೆಯಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ‘ಜಾಂಬವತಿ ಕಲ್ಯಾಣ’. ಸಮಯ: ಸಂಜೆ 4 ರಿಂದ. ಸ್ಥಳ: ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ.
ನೃತ್ಯ ರೂಪಕೋತ್ಸವ: ಪರ್ಯಾಯ ಪೇಜಾವರ ಮಠದ ವತಿಯಿಂದ ನೃತ್ಯನಿಕೇತನ ಕೊಡವೂರು ರಜತಪಥ-ರಜತ ಮಹೋತ್ಸವ ಸಮಿತಿಯ ವತಿಯಿಂದ ನಡೆದಿರುವ ನೃತ್ಯರೂಪಕೋತ್ಸವದಲ್ಲಿ ಸಾಲಿಗ್ರಾಮದ ಡಾ.ಕಾರಂತ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ವಿದ್ವಾನ್ ಸುಧೀರ್‌ರಾವ್ ಕೊಡವೂರು ಇವರ ಮರು ನಿರ್ದೇಶನದಲ್ಲಿ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿಯ ಕಲಾವಿದರಿಂದ ಡಾ.ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆ ‘ಪಂಚವಟಿ’. ಸಮಯ: ಸಂಜೆ 7u3248?ಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ ಉಡುಪಿ.
ಪೇಜಾವರ ಶ್ರೀಗಳ ಪರ್ಯಾಯದಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 9u3248?ಿಂದ ರಾಜಾಂಗಣದಲ್ಲಿ ಪ್ರಥಮ ದಕ್ಷಿಣ ಭಾರತ ಯೋಗ ಸ್ಪರ್ಧೆ, ಸಂಜೆ 5u3221?್ಕೆ ಚಂದ್ರಶಾಲೆ ಪುರಾಣ ಉಡುಪಿಯ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45u3221?್ಕೆ ರಾಜಾಂಗಣದಲ್ಲಿ ಡಾ.ಗಣಪತಿ ಭಟ್ ಕಡಂದಲೆ ಇವರಿಂದ ಧಾರ್ಮಿಕ ಉಪನ್ಯಾಸ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ಸಂಜೆ 7u3248?ಿಂದ ರಾಜಾಂಗಣದಲ್ಲಿ ನೃತ್ಯ ರೂಪಕೋತ್ಸವ.
ಕೃಷಿ ಮೇಳ: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾಗಿರುವ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ಕೃಷಿ ಮೇಳ ಉದ್ಘಾಟನೆ ಹಾಗೂ ವಿಚಾರಗೋಷ್ಠಿ. ಸಮಯ: ಬೆಳಗ್ಗೆ 10:30u3248?ಿಂದ. ಸ್ಥಳ: ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ.