×
Ad

ಇಂದು ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

Update: 2016-10-14 23:44 IST


ಮಂಗಳೂರು, ಅ.14: ಯುನೈಟೆಡ್ ನಂದಿಗುಡ್ಡೆ ಆಯೋಜಿಸಿದ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟವು ಅ.15ರಂದು ನಂದಿಗುಡ್ಡೆ ನಾಯಕ್ಸ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಮನಪಾ ಮೇಯರ್ ಹರಿನಾಥ್ ಎಂ. ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.
ಈ ಪಂದ್ಯಾಟದಲ್ಲಿ ಆಹ್ವಾನಿತ ರಾಷ್ಟ್ರೀಯ ಮಟ್ಟದ 8 ತಂಡಗಳು ಪಾಲ್ಗೊಳ್ಳಲಿದ್ದು, ಏಕಲವ್ಯ ಪ್ರಶಸ್ತಿ ವಿಜೇತ ಅನೂಪ್ ಡಿಕೋಸ್ತ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಖ್ಯಾತ ವಾಲಿಬಾಲ್ ಆಟಗಾರ ಗಣೇಶ್ ಪುತ್ತೂರು ಹಾಗೂ ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ನಾಗೇಶ್ ಎ. ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News