ಫಾದರ್ ಮುಲ್ಲರ್: ಸ್ಟೂಡೆಂಟ್ ಕೌನ್ಸಿಲ್ ಉದ್ಘಾಟನೆ
Update: 2016-10-14 23:44 IST
ಮಂಗಳೂರು, ಅ.14: ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸ್ಟೂಡೆಂಟ್ ಕೌನ್ಸಿಲನ್ನು ಉದ್ಘಾಟಿಸಲಾಯಿತು. ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ವಂ.ಫಾ.ಪ್ಯಾಟ್ರಿಕ್ ರೊಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ.ಸಂತೋಷ್ ಟಿ. ಸೋನ್ಸ್ ಹೊಸ ವಿದ್ಯಾರ್ಥಿ ಕೌನ್ಸಿಲಿಗೆ ಶುಭ ಹಾರೈಸಿದರು. ಕಾಲೇಜಿನ ಆಡಳಿತಾಧಿಕಾರಿ ವಂ.ಫಾ.ರುಡಾಲ್ಫ್ ರವಿ ಡೇಸಾ ಪದಾಧಿಕಾರಿಗಳ ಹೆಸರನ್ನು ವಾಚಿಸಿದರು. ಮೆಡಿಕಲ್ ಕಾಲೇಜಿನ ಡೀನ್ ಡಾ.ಜೆ.ಪಿ.ಆಳ್ವ ಪ್ರತಿಜ್ಞಾವಿಧಿ ಬೋಧಿಸಿದರು. 2015-16u3248? ಕೌನ್ಸಿಲ್ ಅಧ್ಯಕ್ಷ ಜೇಸನ್ ಗ್ಲೆನ್ ಡಿಸೋಜಾ ಹಾಗೂ 2016-17u3248? ಕೌನ್ಸಿಲ್ ಅಧ್ಯಕ್ಷ ರೇಮಂಡ್ ಆ್ಯಂಟನಿ ಪಲ್ಲಿಯಾನ ಮಾತನಾಡಿದರು. ಅನಘ ಭಾಗಿ ಸ್ವಾಗತಿಸಿದರು. ತನ್ವಿ ಪಿಂಟೊ ವಂದಿಸಿದರು.