×
Ad

‘ಗೀತಾಂಜಲಿ ಸಿಲ್ಕ್ಸ್’ ಉಡುಪುಗಳ ಮಳಿಗೆ ಶುಭಾರಂಭ

Update: 2016-10-14 23:45 IST

ಉಡುಪಿ, ಅ.14: ಉಡುಪಿಯ ಹಳೆಯ ಗೀತಾಂಜಲಿ ಟಾಕೀಸಿನ ಜಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಗೀತಾಂಜಲಿ ಶೋಪರ್ ಸಿಟಿಯಲ್ಲಿ ಆರ್.ಕೆ.’ಸ್ ಅವರ ‘ಗೀತಾಂಜಲಿ ಸಿಲ್ಕ್ಸ್’ ಪುರುಷ, ಮಹಿಳೆ, ಮಕ್ಕಳ ಉಡುಪುಗಳ ಮಳಿಗೆ ಶುಕ್ರವಾರ ಶುಭಾರಂಭಗೊಂಡಿತು. ಮಳಿಗೆಯನ್ನು ಉದ್ಘಾಟಿಸಿದ ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಒಂದೇ ಸೂರಿನಡಿ ಎಲ್ಲ ವರ್ಗದವರು ಗುಣಮಟ್ಟದ ಉಡುಪುಗಳು ಕಡಿಮೆ ದರದಲ್ಲಿ ಲಭ್ಯವಾಗುವಂತಹ ಮಳಿಗೆ ಆರಂಭಗೊಂಡಿರುವುದು ಉಡುಪಿಯವರ ಭಾಗ್ಯ. ಈ ಸಂಸ್ಥೆಯವರು ಸುಮಾರು 20u3250?ಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ ಎಂದರು.
 ಈ ಸಂದರ್ಭ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಕೆ.ರಘುಪತಿ ಭಟ್, ಡಾ.ಟಿ.ಎಂ.ಎ.ಪೈ ಫೌಂಡೇಶನ್ ಕಾರ್ಯದರ್ಶಿ ಟಿ.ಅಶೋಕ್ ಪೈ, ಗಾಯತ್ರಿ ಅಶೋಕ್ ಪೈ, ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಮಹಾಪ್ರಬಂಧಕ ಕೆ.ವಿರೂಪಾಕ್ಷ, ರಾಜೇಶ್ವರಿ ಮತ್ತು ಕೆ.ಕೃಷ್ಣನ್, ಮಣಿಪಾಲ ವಿವಿಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಜೆರ್ರಿ ವಿನ್ಸೆಂಟ್ ಡಯಸ್, ಜಯಕರ ಶೆಟ್ಟಿ ಇಂದ್ರಾಳಿ, ಮುಹಮ್ಮದ್ ವೌಲಾ, ಉಪೇಂದ್ರ ನಾಯಕ್, ವಲೇರಿಯನ್ ಸಲ್ದಾನ, ನಗರಸಭಾ ಸದಸ್ಯರಾದ ಶ್ಯಾಮ್‌ಪ್ರಸಾದ್ ಕುಡ್ವ, ರಮೇಶ್ ಕಾಂಚನ್, ರಮೇಶ್ ಪೂಜಾರಿ, ಪುರುಷೋತ್ತಮ ಶೆಟ್ಟಿ, ಆರ್.ಕೆ. ಸಹೋದರರು ಉಪಸ್ಥಿತರಿದ್ದರು. ಆರ್.ಕೆ. ಗ್ರೂಪ್‌ನ ಸಂತೋಷ್ ವಾಗ್ಳೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News