‘ಕೋಟಿಚೆನ್ನಯರ ಗರಡಿ ಜೀರ್ಣೋದ್ಧಾರಕ್ಕೆ ತೀರ್ಮಾನ’
ಮಂಗಳೂರು, ಅ.14: ಕೋಟಿಚೆನ್ನಯರ ಜನ್ಮಸ್ಥಾನ ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದ ಪಡುಮಲೆಯಲ್ಲಿ ಗರಡಿ ಮತ್ತು ಅವರ ಆರಾಧ್ಯ ದೇವರುಗಳಾದ ನಾಗಬೆರ್ಮರ ಗುಡಿ ನಿರ್ಮಾಣ ಸಹಿತ ಜೀವನಗಾಥೆ ಸಾರುವ 26 ಐತಿಹ್ಯಗಳನ್ನು ಸರ್ವಧರ್ಮೀಯರ ಸಹಕಾರದೊಂದಿಗೆ ಜೀರ್ಣೋದ್ಧಾರಕ್ಕೆ ತೀರ್ಮಾನಿಸಲಾಗಿದೆ ಎಂದು ಪಡುಮಲೆ ಕೋಟಿಚೆನ್ನಯ ಜನ್ಮಸ್ಥಳ ಸಂಚಲನಾ ಸಮಿತಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಭಾವಿಯಾಗಿ ಅ.16 ರಂದು ಬೆಳಗ್ಗೆ 10u3221?್ಕೆ ಸೋಣ ನೇಮದ ಸತ್ಯದ ಚಾವಡಿಯಲ್ಲಿ ಪಡುಮಲೆ ಗ್ರಾಮಸ್ಥರ ಸಭೆ ನಡೆಯಲಿದ್ದು, ಊರ ಮತ್ತು ಪರವೂರ ಭಕ್ತರು ಆಗಮಿಸಲಿದ್ದಾರೆ. ಅ.17 ಮತ್ತು 18u3248?ಂದು ಗರಡಿ ನಿರ್ಮಾಣ ಪ್ರಯುಕ್ತ ನಾಗಬ್ರಹ್ಮ ದೇವರ ಪ್ರತಿಷ್ಠೆ ಮತ್ತು ಮಲ್ಲಯ್ಯ ಬುದ್ಧಿವಂತ ಪ್ರೇತಕ್ಕೆ ಮೋಕ್ಷ ಸಹಿತ ವೈಧಿಕ ವಿಧಿ-ವಿಧಾನಗಳು ಜರಗಲಿವೆ ಎಂದರು.
ಕೋಟಿಚೆನ್ನಯರ ಜನ್ಮಸ್ಥಾನ ಪ್ರಸ್ತುತ ಚಲನಚಿತ್ರ ನಟ ವಿನೋದ ಆಳ್ವ ಅವರ ಪತ್ನಿ ಹೆಸರಿನಲ್ಲಿ ಹಕ್ಕು ಹೊಂದಿದ್ದು, ಟ್ರಸ್ಟ್‌ಗೆ 1.5 ಎಕರೆ ಜಾಗವನ್ನು ದಾನದ ರೂಪದಲ್ಲಿ ಹಕ್ಕುಪತ್ರ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ಕಂದಾಯ ಇಲಾಖೆಯಿಂದ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ವಿವಿಧ ಜಾತಿಮತಗಳ ಪ್ರಮುಖರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದರು.
ಸಮಿತಿಯ ಕಾರ್ಯಾಧ್ಯಕ್ಷ ಮಾಜಿ ಶಾಸಕ ಎ.ರುಕ್ಮಯ್ಯ ಪೂಜಾರಿ, ಉಪಾಧ್ಯಕ್ಷರಾದ ವಿಜಯಕುಮಾರ್ ಸೊರಕೆ, ಮನೋಜ್ ರೈ ಪೇರಾಲು, ಪದ್ಮನಾಭ ಕೋಟ್ಯಾನ್ ನೀರುಮಾರ್ಗ, ರೋಹಿನಾಥ್ ಪಾದೆ, ಶ್ರೀಧರ ಪಟ್ಲ, ಶೇಖರ ನಾರಾವಿ, ಸಂತೋಷ್ ಕುಮಾರ್ ಕಾಪಿನಡ್ಕ, ಕೃಷ್ಣ ಪೂಜಾರಿ ಕಲ್ಲಡ್ಕ, ಮಾಜಿ ಜಿಪಂ ಸದಸ್ಯ ಶೈಲೇಶ್ ಕುಮಾರ್, ಉದ್ಯಮಿ ಲೋಕನಾಥ್, ಸುರೇಶ್ಚಂದ್ರ ಕೋಟ್ಯಾನ್, ಲೋಕಯ್ಯ ಬಜ್ಪೆ ಉಪಸ್ಥಿತರಿದ್ದರು.